ಐಶು ಫೋಟೊ ಕಟ್ ಮಾಡಿದರೆ ಸಲ್ಲೂ?

ಬುಧವಾರ, ಜೂನ್ 19, 2019
26 °C
Salman Khan

ಐಶು ಫೋಟೊ ಕಟ್ ಮಾಡಿದರೆ ಸಲ್ಲೂ?

Published:
Updated:
Prajavani

ಬಾಲಿವುಡ್‌ನ ಮೋಸ್ಟ್‌ ಎಲಿಜಬಲ್ ಬ್ಯಾಚುಲರ್ ಸಲ್ಮಾನ್  ಖಾನ್ ಈಚೆಗೆ ‘ಹಮ್ ದಿಲ್ ದೇ ಚುಕೇ ಸನಂ’ ಸಿನಿಮಾದ ಸೆಟ್‌ನ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ‘ಮಲಾಲ್’ ಸಿನಿಮಾದ ನಾಯಕಿ ಶರ್ಮಿನ್ ಸೆಂಘಾಲ್, ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕೇಕ್ ತಿನ್ನಿಸುವ ದೃಶ್ಯವಿತ್ತು. ಈ ಫೋಟೊದಲ್ಲಿ ಐಶ್ವರ್ಯಾ ರೈ ಕೂಡಾ ಇದ್ದರು. ಆದರೆ, ಸಲ್ಮಾನ್ ಬೇಕಂತಲೇ ಐಶ್ವರ್ಯಾಳನ್ನು ಫೋಟೊದಲ್ಲಿ ಕಟ್ ಮಾಡಿದ್ದಾರೆ ಎಂದು ಐಶು ಅಭಿಮಾನಿಗಳು ಆರೋಪಿಸಿದ್ದಾರೆ.

‘ಹಮ್ ದಿಲ್ ದೇ ಚುಕೇ ಸನಂ’ ಚಿತ್ರದ ‘ಆಂಖೋ ಕಿ ಗುಸ್ತಾಕಿಯಾ’ ಹಾಡಿನಲ್ಲಿ ಐಶು ಧರಿಸಿದ್ದ ಪೀಚ್ ಕಲರ್ ಲೆಹಂಗಾ ಗುರುತಿಸಿದ ಅಭಿಮಾನಿಗಳು ನಿಸ್ಸಂಶಯವಾಗಿ ಐಶು ಆ ಫೋಟೊದಲ್ಲಿದ್ದಾಳೆ. ಆದರೆ, ಬೇಕಂತಲೇ ಸಲ್ಲೂ ಆ ಫೋಟೊವನ್ನು ಕ್ರಾಪ್ ಮಾಡಿದ್ದಾರೆ ಎಂದು ದೂರಿದ್ದಾರೆ.  

ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ಸಂಬಂಧಿ ಶರ್ಮಿನ್ ಸೆಂಘಾಲ್‌ಗಾಗಿ ‘ಮಲಾಲ್’ ಸಿನಿಮಾ ನಿರ್ಮಿಸಿದ್ದಾರೆ. ಶರ್ಮಿನ್ ಜತೆ ಮಿಜಾನ್ ಜಾಫ್ರೀ ಕೂಡಾ  ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. 

ಶರ್ಮಿನ್‌ಗೆ ಶುಭ ಹರಸಲು ಸಲ್ಲೂ ಈ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ‘ಪುಟ್ಟ ಸುಂದರ ಹುಡುಗಿ ಶರ್ಮಿನ್ ಈಗ ಬೆಳ್ಳಿತೆರೆಗೆ ಬರಲು ಸನ್ನದ್ಧಳಾಗಿದ್ದಾಳೆ. ಈ ಹೊಸ ಪಯಣ ಅವಳಿಗೆ  ಯಶಸ್ಸು ಮತ್ತು ಅದೃಷ್ಟ ತರಲಿ’ ಎಂಬ ಒಕ್ಕಣೆಯನ್ನೂ ಸಲ್ಮಾನ್ ಬರೆದಿದ್ದರು. ‘ಹಮ್ ದಿಲ್ ದೇ ಚುಕೇ ಸನಂ’ ಸಿನಿಮಾ ಚಿತ್ರೀಕರಣ ವೇಳೆಯಲ್ಲಿ ಐಶು ಮತ್ತು ಸಲ್ಲೂ ಪ್ರೀತಿಯಲ್ಲಿ ಬಿದ್ದಿದ್ದರು. ಎರಡು ವರ್ಷಗಳ ನಂತರ ತಾವಿಬ್ಬರೂ ಪ್ರೀತಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !