ಸೋಮವಾರ, ಜನವರಿ 17, 2022
27 °C

ಬಾಲಿವುಡ್ ಪ್ರವೇಶಿಸಲು ಸಜ್ಜಾದ ಸಲ್ಮಾನ್ ಖಾನ್ ಸೊಸೆ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Alizeh Instagram Post

ಬೆಂಗಳೂರು: ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಅಲೀಜ್ ಅಗ್ನಿಹೋತ್ರಿ ಬಾಲಿವುಡ್‌ಗೆ ಪ್ರವೇಶಿಸುವುದು ಬಹುತೇಕ ಪಕ್ಕಾ ಆಗಿದೆ.

ಸಲ್ಮಾನ್ ಖಾನ್ ಸೊಸೆಯಾಗಿರುವ ಅಲೀಜ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಲು ಸಿದ್ಧತೆ ನಡೆದಿದೆ.!

ಸಿನಿಮಾ ನಟನೆ ಮತ್ತು ರಂಗಭೂಮಿಯ ತರಬೇತಿ ಪಡೆಯುತ್ತಿರುವ ಅಲೀಜ್, ಚಿತ್ರರಂಗ ಪ್ರವೇಶಕ್ಕೂ ಮುನ್ನವೇ ಜಾಹೀರಾತು ಚಿತ್ರೀಕರಣವೊಂದರಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದಾರೆ.

2022ರಲ್ಲಿ ಅಲೀಜ್ ಚಿತ್ರರಂಗ ಪ್ರವೇಶಿಸುವ ಸಾಧ್ಯತೆಯಿದ್ದು, 2023ಕ್ಕೆ ಅವರ ನಟನೆಯ ಹೊಸ ಚಿತ್ರ ತೆರೆಕಾಣುವ ಸಾಧ್ಯತೆಯಿದೆ.

ಈ ಮಧ್ಯೆ 'ಟೈಗರ್ 3' ಚಿತ್ರದಲ್ಲಿ ತೊಡಗಿಸಿಕೊಂಡಿರುವ ಸಲ್ಮಾನ್ ಖಾನ್, ಅಲೀಜ್ ಚಿತ್ರರಂಗ ಪ್ರವೇಶಿಸುವ ಕುರಿತಂತೆ ಕಾರ್ಯೋನ್ಮುಖರಾಗಿದ್ದಾರೆ. ಸೊಸೆಯನ್ನು ಅದ್ಧೂರಿ ಚಿತ್ರದ ಮೂಲಕ ಪರಿಚಯಿಸಲು ಸಲ್ಮಾನ್ ಕುಟುಂಬ ತಯಾರಿ ನಡೆಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು