ಫಾರ್ಮ್ ಹೌಸ್ನಲ್ಲಿ ಜಾಕ್ವೆಲಿನ್ಗೆ ತೋಟ ಅಗೆಯಲು ಹೇಳಿದ್ದರಂತೆ ಸಲ್ಮಾನ್ ಖಾನ್

ಮುಂಬೈ: ಕಳೆದ ವರ್ಷ ಕೊರೊನಾ ವೈರಸ್ ನಿಯಂತ್ರಣದ ದೃಷ್ಟಿಯಲ್ಲಿ ಹೇರಲಾಗಿದ್ದ ಲಾಕ್ಡೌನ್ ವೇಳೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್ಹೌಸ್ನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭ ನಡೆದ ಸ್ವಾರಸ್ಯಕರ ಘಟನೆಯನ್ನು ಸಲ್ಮಾನ್ ಖಾನ್ ಟಿವಿ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದ್ದಾರೆ.
ಟ್ರೇಡ್ಮಿಲ್ ವರ್ಕ್ಔಟ್ ಬದಲು ತೋಟದಲ್ಲಿ ಕೆಲಸ ಮಾಡುವಂತೆ ಜಾಕ್ವೆಲಿನ್ ಅವರಿಗೆ ಸಲಹೆ ನೀಡಿದ್ದಾಗಿ ಸಲ್ಮಾನ್ ಖಾನ್ ಹೇಳಿದ್ದಾರೆ.
'ನಮ್ಮ ಜೊತೆ ಜಾಕ್ವೆಲಿನ್ ಕೂಡ ಇದ್ದರು. ಟ್ರೇಡ್ಮಿಲ್ನಲ್ಲಿ ಜಾಕ್ವೆಲಿನ್ ಮೂರ್ಖರಂತೆ ವರ್ಕ್ಔಟ್ ಮಾಡುತ್ತಿದ್ದರು. ನಾನು ಫಾರ್ಮ್ಹೌಸ್ನ ತೋಟದಲ್ಲಿ ಕೆಲಸ ಮಾಡಲು ಸಲಹೆ ನೀಡಿದೆ' ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ.
ಫಾರ್ಮ್ಹೌಸ್ನಲ್ಲಿ ಉಳಿದುಕೊಂಡಿದ್ದ ವೇಳೆ ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಮ್ಯೂಸಿಕ್ ವಿಡಿಯೊ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
'ಕಿಕ್ 3' ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಜೋಡಿ ತೆರೆಗೆ ಬರಲಿದೆ. ಪ್ರಸ್ತುಕ ಸಲ್ಮಾನ್ ಖಾನ್ ಅವರ 'ಅಂತಿಮ್' ಚಿತ್ರ ಬಿಡುಗಡೆಯಾಗಿದೆ. ಸಲ್ಮಾನ್ ಅವರ ಮುಂಬರುವ ಚಿತ್ರಗಳಾದ 'ಟೈಗರ್ 3'ನಲ್ಲಿ ಕತ್ರಿನಾ ಕೈಫ್, 'ಭಾಯಿಜಾನ್'ನಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಜೊತೆಗೆ 'ಪಠಾಣ್' ಚಿತ್ರದಲ್ಲಿ ಮತ್ತು ಅಮೀರ್ ಖಾನ್ ಜೊತೆಗೆ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
'ಅಂತಿಮ್': ಚಿತ್ರಮಂದಿರದೊಳಗೇ ಪಟಾಕಿ ಸಿಡಿಸಿದ ಸಲ್ಮಾನ್ ಖಾನ್ ಅಭಿಮಾನಿಗಳು!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.