ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದರಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಸಮಂತಾ, ತಮ್ಮ ಹೊಸ ಲುಕ್‌ನಿಂದಾಗಿ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿರುವ ‘ಓ ಬೇಬಿ’ ಸಿನಿಮಾದ ಟ್ರೇಲರ್ ಅನ್ನು ಸಾಕಷ್ಟು ಜನ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಮೆಂಟ್‌ಗಳು ಕೂಡ ಸಮಂತಾ ಅವರ ಹೊಸ ಲುಕ್ ಹಾಗೂ ಅವರ ವಿಭಿನ್ನ ನಟನೆಯನ್ನು ಕೇಂದ್ರೀಕರಿಸಿವೆ.

ನಂದಿನಿ ರೆಡ್ಡಿ ಅವರ ನಿರ್ದೇಶನದ ಈ ಸಿನಿಮಾ, ದಕ್ಷಿಣ ಕೊರಿಯಾದ ‘ಮಿಸ್ ಗ್ರ್ಯಾನಿ’ ಸಿನಿಮಾವನ್ನು ಆಧರಿಸಿದೆ. ಸಮಂತಾ ಅವರೊಂದಿಗೆ ನಾಗ ಶೌರ್ಯ, ಲಕ್ಷ್ಮಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಜುಲೈ 5ರಂದು ಸಿನಿಮಾ ತೆರೆಕಾಣಲು ಸಿದ್ದತೆ ನಡೆಸಿದೆ.

ಎರಡು ನಿಮಿಷದ ಟ್ರೇಲರ್ ನೇರವಾಗಿ ಸಿನಿಮಾದ ಕಥೆಯನ್ನು ಹೇಳುವಂತಿದೆ. 70 ವರ್ಷದ ಅಜ್ಜಿ 24 ವರ್ಷದ ಯುವತಿಯಂತೆ ವರ್ತಿಸುತ್ತಾಳೆ. ಇಡೀ ಸಿನಿಮಾ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವಂತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸಿನಿಮಾದಲ್ಲಿ ಕೇವಲ ತಮಾಷೆ ಮಾತ್ರವಲ್ಲ ಭಾವನಾತ್ಮಕ ಸನ್ನಿವೇಶಗಳು ಕೂಡ ಇವೆ. ಪಂಚಭಾಷಾ ತಾರೆ ಲಕ್ಷ್ಮಿ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.