ಬೆಂಗಳೂರು: ಬಹುಭಾಷಾ ನಟಿ ಸಮಂತಾ ಫೆಬ್ರುವರಿ 26ಕ್ಕೆ ವೃತ್ತಿರಂಗಕ್ಕೆ ಕಾಲಿಟ್ಟು 13 ವರ್ಷಗಳನ್ನು ಯಶಸ್ವಿಯಾಗಿ ಕಳೆದಿದ್ದಾರೆ. ಇಂದಿಗೂ ಕೂಡ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸಮಂತಾ ತಮ್ಮ ಬೋಲ್ಡ್ ಲುಕ್‌ನಿಂದ ಅಷ್ಟೇ ಅಲ್ಲದೇ ತಮ್ಮ ನಟನೆಯ ಮೂಲಕ, ಫಿಟ್‌ನೆಸ್‌ನಿಂದ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸಮಂತಾ ವೃತ್ತಿ ಬದುಕಿನ 13ನೇ ವರ್ಷಾಚರಣೆಗೆ ನಟ, ನಿರ್ದೇಶಕ ರಾಹುಲ್ ರವೀಂದ್ರನ್ ಅವರು ಸಮಂತಾ ಅವರ ವಿಶೇಷ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಅಂದರೆ, ಸಮಂತಾ ಅವರು ಕೇವಲ 16 ವರ್ಷವಿರುವಾಗಿನ ಫೋಟೊವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
‘ಈ ಫೋಟೊ ನೋಡಿ, ಇದು ಸಮಂತಾ. ಚೆನ್ನೈನ ನಮ್ಮ ಮನೆಯ ಟೆರಸ್‌ನಲ್ಲಿ ಸಮಂತಾ 16 ವರ್ಷವಳಿರುವಾಗ ಈ ಫೋಟೊ ತೆಗೆಯಲಾಗಿದೆ. ರೋಹಿತ್ ರವೀಂದ್ರನ್ ಅವರು ಈ ಫೋಟೊ ಕ್ಲಿಕ್ಕಿಸಿದ್ದಾರೆ. ಶುಭಾಶಯಗಳು ಸಮಂತಾ, ಸಿನಿಮಾರಂಗದಲ್ಲಿ ಇನ್ನೂ ಹಲವು ದಶಕಗಳು ನಿನ್ನದಾಗಲಿ’ ಎಂದು ರಾಹುಲ್ ರವೀಂದ್ರನ್ ಹಾರೈಸಿದ್ದಾರೆ. ಈ ಚಿತ್ರ ಸಮಂತಾ
ರಾಹುಲ್ ರವೀಂದ್ರನ್ ಅವರು ತೆಲುಗು ಯು–ಟರ್ನ್ ಸಿನಿಮಾದಲ್ಲಿ ಸಮಂತಾ ಜೊತೆ ಅಭಿನಯಿಸಿದ್ದಾರೆ.
ಸದ್ಯ ಸಮಂತಾ ‘ಶಾಕುಂತಲಂ’ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಚಿತ್ರ ‘ಸಿಟಡೆಲ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ನಾಗಚೈತನ್ಯ ಜೊತೆ ‘ಏ ಮಾಯೆ ಚೆಸಾವೇ’ ಸಿನಿಮಾದಲ್ಲಿ ಸಮಂತಾ ಮೊದಲ ಬಾರಿಗೆ ನಟಿಸಿದ್ದರು. ಆ ಚಿತ್ರ 2010ರಲ್ಲಿ ಬಿಡುಗಡೆಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.