ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಮಯ’ ಪರೀಕ್ಷೆಗಿಳಿದ ತಂಡ!

Published 7 ಜೂನ್ 2024, 0:07 IST
Last Updated 7 ಜೂನ್ 2024, 0:07 IST
ಅಕ್ಷರ ಗಾತ್ರ

ಈಗಾಗಲೇ ನಾಲ್ಕು ಚಿತ್ರಗಳನ್ನು ನಿರ್ಮಿಸಿರುವ ನಿರ್ದೇಶಕ, ನಿರ್ಮಾಪಕ ಎಸ್.ಆರ್.ಪ್ರಮೋದ್ ಮತ್ತೆ ‘ಸಮಯ’ ಪರೀಕ್ಷೆಗಿಳಿದಿದ್ದಾರೆ. 

‘ತಂದೆ, ಮಗನ ನಡುವಿನ ಬಾಂಧವ್ಯವನ್ನು ಹೇಳುವ ಚಿತ್ರ. ಅಪ್ಪನಾದವನು ಕಷ್ಟಪಟ್ಟು, ಸಾಲ ತೆಗೆದುಕೊಂಡು, ಸರ್ವಸ್ವವನ್ನು ತ್ಯಾಗ ಮಾಡಿ, ಪುತ್ರನ ವಿದ್ಯಾಭ್ಯಾಸ ಮಾಡಿಸಲು ಮುಂದಾಗುತ್ತಾನೆ. ಆದರೆ ಪುಂಡ ಮಗ ಓದದೆ ಕುಟುಂಬದ ನೆಮ್ಮದಿ ಹಾಳು ಮಾಡುತ್ತಾನೆ. ಆತ ಸರಿ ಹೋಗುತ್ತಾನಾ? ಮನೆಯ ಪರಿಸ್ಥಿತಿ ಏನಾಗುತ್ತದೆ? ಪ್ರೀತಿಸಿದವಳು ಏನಾಗುತ್ತಾಳೆ? ಎಂಬುದೇ ಚಿತ್ರಕಥೆ’ ಎಂದರು ನಿರ್ದೇಶಕರು.

ಹೊಸ ಪ್ರತಿಭೆ ರಮ್ಯ ನಾಯಕಿ. ಭೀಮಣ್ಣ ನಾಯ್ಕ್, ಕಿಟ್ಟಿ, ಚಂದ್ರಶೇಖರ್, ಮಂಜು ಮಡಬ ಮುಂತಾದವರು ಬಣ್ಣ ಹಚ್ಚಿದ್ದಾರೆ. ಮಲ್ಲೇಶ್.ಪಿ.ವಿಜ್ಜು ಸಾಹಿತ್ಯದ ಎರಡು ಹಾಡುಗಳಿಗೆ ಕೇವೀನ್ ಸಂಗೀತ ಸಂಯೋಜಿಸಿದ್ದಾರೆ. ಗಿರೀಶ್‌ ಛಾಯಾಚಿತ್ರಗ್ರಹಣವಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT