ಮಂಗಳವಾರ, ಮೇ 24, 2022
26 °C

ನಟಿ ದಿಶಾ ಮದನ್ ಬೇಬಿ ಬಂಪ್ ವಿಡಿಯೊ ವೈರಲ್‌: ಅಭಿಮಾನಿಗಳಿಂದ ಮೆಚ್ಚುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ದಿಶಾ ಮದನ್ ಅವರು ತುಂಬು ಗರ್ಭಿಣಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರು ಬೇಬಿ ಬಂಪ್ ಫೋಟೊಶೂಟ್‌ ಮಾಡಿಸಿದ್ದು, ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದಿಶಾ ಮದನ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತುಂಬು ಗರ್ಭಿಣಿಯಾಗಿರುವ ಅವರು ಫೋಟೊಶೂಟ್ ಮಾಡಿಸಿದ್ದು, ವಿಡಿಯೊ ಮತ್ತು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಮಾತೃತ್ವ ಮತ್ತು ಫ್ಯಾಷನ್ ಒಟ್ಟಿಗೆ ಹೋಗುವುದಿಲ್ಲ ಎಂದು ಯಾರು ಹೇಳಿದರು?’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಓದಿ... ನಟ ಅಲ್ಲು ಅರ್ಜುನ್‌ಗೆ ಮಗಳು ಅರ್ಹಾ ಕೋರಿದ ‘ಪ್ರೀತಿಯ ಸ್ವಾಗತ’ ಹೀಗಿತ್ತು ನೋಡಿ..

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿಕೊಂಡು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು, ಕಿರುತರೆ ನಟಿಯಾಗಿ ಕಡೆಗೆ ಶಿವರಾಜ್ ಕುಮಾರ್ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಪಾತ್ರಮಾಡಿ ಫೇಮಸ್‌ ಆಗಿದ್ದವರು ದಿಶಾ ಮದನ್.

ಮೊದಲು ‘ವಿ ಆರ್ ಪ್ರೆಗ್ನೆಂಟ್’ ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದರು. ಅದಾದ ಮೇಲೆ ಶುರುವಾಗಿದ್ದು ಅವರ ಭಿನ್ನ ಭಿನ್ನ ಪ್ರೆಗ್ನೆನ್ಸಿ ಪೋಟೊ ಶೂಟ್‌ಗಳ ಹರಿವು. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹೊಸ ಹೊಸ ಪೋಟೊಗಳನ್ನು ಅಪ್‌ಲೋಡ್ ಮಾಡುವುದರ ಜೊತೆಗೆ ಗರ್ಭಿಣಿ ಮಹಿಳೆಯರಿಗೆ ಧೈರ್ಯ ತುಂಬುವ ಕಾರ್ಯವನ್ನೂ ಮಾಡಿದ್ದರು, ತಮ್ಮ ಮನದಾಳವನ್ನು ತೆರೆದಿಟ್ಟಿದ್ದರು.

‘ಹೆಣ್ಣು ಗರ್ಭಿಣಿಯಾದ ವೇಳೆಯಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ತುಂಬಾ ಬದಲಾಗುತ್ತಾಳೆ. ಅವಳ ಪಾಲಿಗೆ ಇದು ಮ್ಯಾಜಿಕಲ್ ಜರ್ನಿ. ಎಲ್ಲವನ್ನೂ ಪಾಸಿಟಿವ್ ಆಗಿ ಕಂಡು, ಸಂತೋಷದಿಂದ ಇರುವುದು, ಕಾಲ ಕಾಲಕ್ಕೆ ವೈದ್ಯರ ಸಲಹೆ ಪಡೆದು ಮುಂದುವರೆದು ತಾಯ್ತನವನ್ನು ಅನುಭವಿಸಬೇಕು’ ಎಂದು ಬರೆದುಕೊಂಡಿದ್ದರು. ಜೊತೆಗೆ ಭಿನ್ನವಾದ ಮತ್ತು ಸಾಂಪ್ರದಾಯಿಕವಾದ ಫೋಟೊ ಶೂಟ್‌ಗಳನ್ನು ಮಾಡಿಸಿದ್ದಾರೆ.

‘ಫೆಂಚ್‌ ಬಿರಿಯಾನಿ’ ಚಿತ್ರದ ಮೂಲಕ ದಿಶಾ, ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಸಿನಿಮಾ ಪಿಆರ್‌ಕೆ ಪ್ರೊಡಕ್ಷನ್‌ನಡಿ‌ ನಿರ್ಮಾಣವಾಗಿದೆ.

ಓದಿ... ಫೋಟೊ ಶೂಟ್ ಗರ್ಭಿಣಿಯರ ಬಯಕೆಯಲ್ಲೊಂದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು