ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ,ನಟ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ದ ಎರಡನೇ ಹಾಡು ನಾಳೆ (ಶನಿವಾರ) ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ.

ಚಿತ್ರದ ‘ರಾ.. ರಾ. ರಕ್ಕಮ್ಮ’ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಉತ್ತಮ ಗುಣಮಟ್ಟದಲ್ಲಿ ಮೂಡಬಂದಿರುವ ಟ್ರೇಲರ್ನಲ್ಲಿ ಹಲವು ಕುತೂಹಲಕಾರಿ ಅಂಶಗಳು ಗಮನ ಸೆಳೆದಿವೆ. ಈ ಚಿತ್ರ ಜುಲೈ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಈ ಚಿತ್ರದ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದು, ರಕೇಲ್ ಡಿಕೋಸ್ಟ ಉರ್ಫ್ ‘ಗಡಂಗ್ ರಕ್ಕಮ್ಮ’ನಾಗಿ ವಿಶೇಷ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು ‘3ಡಿ’ ಯಲ್ಲಿ ತೆರೆಕಾಣಲಿದೆ. ಸ್ವತಃ ಸುದೀಪ್ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್ನ ಡಬ್ಬಿಂಗ್ ಮಾಡಿರುವುದು ವಿಶೇಷ.

ಓದಿ...

ಸಿಂಪಲ್ ಸೀರೆಯಲ್ಲಿ ಗಮನ ಸೆಳೆದ ಸಾಯಿ ಪಲ್ಲವಿ: ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ

ಹಾಟ್ ಫೋಟೊ ವೈರಲ್: ಬಿಸಿಲಿಗೆ ನಶೆ ಏರಿಸಿದ ತುಪ್ಪದ ಹುಡುಗಿ ‘ರಾಗಿಣಿ ದ್ವಿವೇದಿ’

ಹಾಟ್ ಫೋಟೊ ಹಂಚಿಕೊಂಡ ಮಾಳವಿಕಾ ಮೋಹನನ್: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ಸಿದ್ಧಾರ್ಥ್ ಮಲ್ಹೋತ್ರಾ ಜತೆ ಬ್ರೇಕಪ್: ಮೌನ ಮುರಿದ ಕಿಯಾರಾ ಅಡ್ವಾಣಿ ಹೇಳಿದ್ದೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.