ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೇಟ್‌ ಅಪ್ಪನಿಗೆ ಹೆಣ್ಣು ನೋಡುವ ಮಗ

Last Updated 20 ಅಕ್ಟೋಬರ್ 2022, 13:07 IST
ಅಕ್ಷರ ಗಾತ್ರ

ಸುರೇಶ್ ಪ್ರೊಡಕ್ಷನ್ ಕಂಬೈನ್ಸ್ ಅಡಿಯಲ್ಲಿ ಸಿದ್ಧಗೊಳ್ಳುತ್ತಿರುವ ‘ಅಪ್ಪ ಈಸ್ ಗ್ರೇಟ್’ ಚಿತ್ರದ ಮುಹೂರ್ತವು ಬಾಪೂಜಿನಗರದ ಬೀರೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು.

ಚಿತ್ರಕ್ಕೆ ಜಿ.ರಾಜಶೇಖರ್ ಕಥೆ, ಸಂಭಾಷಣೆ ಬರೆದು ಬಂಡವಾಳ ಹೂಡುತ್ತಿದ್ದಾರೆ. ರಾಮನಗರದ ಸುರೇಶ್ ಎಸ್.ಎಚ್. ನಿರ್ಮಾಣದಲ್ಲಿ ಪಾಲುದಾರರು. ಹಿರಿಯ ನಟ ಹೊನ್ನವಳ್ಳಿಕೃಷ್ಣ ಪುತ್ರ ಶ್ರೀಕಾಂತ್‌ ಹೊನ್ನವಳ್ಳಿ ಅವರ ನಿರ್ದೇಶನವಿದೆ.

ಮಗನೇ ಅಪ್ಪನಿಗೆ ಮದುವೆ ಮಾಡಿಸಲು ಓಡಾಡುವುದೇ ಕಥೆಯ ವಿಶೇಷ. ಅಮ್ಮ ಸಾಯುವಾಗ ಮನೆಯಲ್ಲಿ ಹೆಣ್ಣು ದಿಕ್ಕಿಲ್ಲ. ಅದರಿಂದ ಅವರಿಗೆ ಹೇಗಾದರೂ ಹೆಣ್ಣನ್ನು ನೋಡಿ ಮದುವೆ ಮಾಡಿಸು ಎಂದು ಭಾಷೆ ತೆಗೆದುಕೊಂಡಿರುತ್ತಾರೆ. ಅದರಂತೆ ಮಗನಾದವನು ಅಮ್ಮನ ಆಸೆಯನ್ನು ನೆರವೇರಿಸುತ್ತಾನಾ? ಇಲ್ಲವೇ? ಎಂಬುದು ಒಂದು ಎಳೆಯ ಸಾರಾಂಶ. ಜತೆಗೆ ತಂದೆ ಮಗನ ಬಾಂಧವ್ಯವನ್ನು ತೋರಿಸಲಾಗುತ್ತಿದೆ ಎಂದಿದೆ ಚಿತ್ರತಂಡ.

ವಿಧುರ ಶ್ರೀಮಂತ ಉದ್ಯಮಿಯಾಗಿ ಶೋಭರಾಜ್, ಮಜಾಭಾರತ್ ಖ್ಯಾತಿಯ ಜ್ಯೂ.ದರ್ಶನ್ ಎಂದೇ ಗುರುತಿಸಿಕೊಂಡಿರುವ ಅವಿನಾಶ್ ನಾಯಕ. ಮಂಡ್ಯದ ಪ್ರೇರಣಾ ಅನಾಥ ಹುಡುಗಿಯಾಗಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೀಸೆ ಆಂಜನಪ್ಪ, ಹೊನ್ನವಳ್ಳಿ ಕೃಷ್ಣ, ರಾಧಿಕಾ, ಸೌಮ್ಯಾ, ಅಮೂಲ್‌ಗೌಡ, ಶಿಲ್ಪ, ಕವನ, ಚಂದ್ರಪ್ರಭಾ, ಪ್ರೇಮಾರಾಥೋಡ್, ಶಿವಕುಮಾರ ಆರಾಧ್ಯ ಮುಂತಾದವರು ನಟಿಸುತ್ತಿದ್ದಾರೆ. ಶಿವಲಿಂಗೇಗೌಡರ ಸಾಹಿತ್ಯದ ಮೂರು ಹಾಡುಗಳಿಗೆ ಮುರಳಿಧರ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ವೀನಸ್‌ ನಾಗರಾಜಮೂರ್ತಿ, ಸಂಕಲನ ಅರುಣ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT