‘ಆರ್ ಎಕ್ಸ್ ಸೂರಿ’ ಮತ್ತು ‘ಭೈರಾದೇವಿ’ ನಿರ್ದೇಶಕ ಶ್ರೀಜೈ ಹೊಸ ಸಿನಿಮಾಗೆ ಚಾಲನೆ ನೀಡಿದ್ದಾರೆ. ಶ್ರೀಜೈ ಆ್ಯಕ್ಷನ್ ಕಟ್ ಹೇಳಲಿರುವ ಹೊಸ ಸಿನಿಮಾದಲ್ಲಿ ಸಂದೀಪ್ ನಾಗರಾಜ್ ನಾಯಕನಾಗಿ ನಟಿಸಲಿದ್ದಾರೆ.

ಪ್ರೊಡಕ್ಷನ್ ನಂ.1 ವರ್ಕಿಂಗ್ ಟೈಟಲ್ನಲ್ಲಿ ಸಿನಿಮಾ ಘೋಷಣೆಯಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದೆ. ಸಂದೀಪ್ ಈಗಾಗಲೇ ‘ಗೂಗ್ಲಿ’, ‘ಅನಂತು ವರ್ಸಸ್ ನುಸ್ರುತ್’, ‘ಪ್ರಭುತ್ವ’, ‘1/2 ಮೆಂಟ್ಲು’ ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಶ್ರೀಜೈ ಕಥೆಯಲ್ಲಿ ಪೂರ್ಣವಾದ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್ ನೋಡಿದರೆ ಇದು ರೌಡಿಸಂ ಕಥೆ ಎನ್ನುವುದು ಸ್ಪಷ್ಟ.

ಡ್ರೀಮ್ ವರ್ಲ್ಡ್ ಸಿನಿಮಾಸ್ ಹಾಗೂ ರಾಧಾಕೃಷ್ಣ ಆರ್ಟ್ಸ್ ಬ್ಯಾನರ್ನಡಿ ಈ ಸಿನಿಮಾ ನಿರ್ಮಾಣವಾಗಲಿದೆ. ಸೋಲೋಮನ್ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದು, ಶ್ರೀಕಾಂತ್ ಸಂಕಲನ ಹಾಗೂ ‘ಭೈರಾದೇವಿ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದ ಸೆಂಥಿಲ್ ಪ್ರಶಾಂತ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.