ಭಾನುವಾರ, ಮೇ 16, 2021
23 °C

ರಣಬೀರ್‌ ಕಪೂರ್‌, ಇತರ ನಟರ ಅಭಿನಯದ ‘ಸಂಜು’ಗೆ ಮುಂಗಡ ಬುಕ್ಕಿಂಗ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದ ಮುನ್ನಾ ಭಾಯಿ ಎಂಬಿಬಿಎಸ್‌ ಚಿತ್ರ ಸಂಜಯ್‌ ದತ್‌ ಅವರ ವೃತ್ತಿ ಬದುಕನ್ನೇ ಬದಲಿಸಿತ್ತು. ಈಗ ರಣಬೀರ್‌ ಕಪೂರ್‌ ಅಭಿನಯದ ‘ಸಂಜು’ ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ.

‘ಸಂಜು’ ಸಂಜಯ್‌ ದತ್‌ ಅವರ ಜೀವ ಚರಿತ್ರೆಯಾಗಿದ್ದು, ರಾಜ್‌ ಕುಮಾರ್‌ ಹಿರಾನಿ ನಿರ್ದೇಶನ ಮಾಡಿದ್ದಾರೆ. 15 ವರ್ಷಗಳ ಹಿಂದೆ ಸಂಜಯ್‌ ದತ್‌ ಅಭಿನಯದ ಮುನ್ನಾ ಭಾಯಿ ಎಂಬಿಬಿಎಸ್‌ ಚಿತ್ರವನ್ನು ನಿರ್ದೇಶಿಸಿದ್ದೂ ಇದೇ ರಾಜ್‌ ಕುಮಾರ್‌ ಹಿರಾನಿ.

ಪರೇಶ್ ರಾವಲ್, ಮನೀಶಾ ಕೊಯಿರಾಲಾ, ದಿಯಾ ಮಿರ್ಜಾ, ವಿಕಿ ಕೌಶಲ್, ಸೋನಮ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಕರಿಶ್ಮಾ ತನ್ನಾ ಸಹ ‘ಸಂಜು’ ಚಿತ್ರದಲ್ಲಿ ನಟಿಸಿದ್ದಾರೆ. 

‘ಸಂಜು’ ಚಿತ್ರದ ಪೋಸ್ಟರ್‌ ಮತ್ತು ಟ್ರೇಲರ್‌ಗಳು ಅಚ್ಚರಿ ಮೂಡಿಸುವಂತಿದ್ದು, ರಣಬೀರ್‌ ಕಪೂರ್‌ ಅಭಿನಯ ಮೌಲ್ಯಯುತವಾಗಿದೆ ಎಂದು ಸಿನಿಮಾ ಮಂದಿ ಹೇಳುತ್ತಿದ್ದಾರೆ.

ಮುಂಗಡ ಬುಕ್ಕಿಂಗ್‌ ಕುರಿತು ಟ್ವೀಟ್‌ ಮಾಡಿರುವ ವಿಶ್ಲೇಷಕ ತರಣ್ ಆದರ್ಶ್‌, ‘ರಾಜ್‌ ಕುಮಾರ್‌ ಹಿರಾನಿ ಅವರ ನಿರೀಕ್ಷೆಯ ಎಲ್ಲಾ ದೃಶ್ಯಗಳು ಸಂಜುನಲ್ಲಿವೆ. ಚಿತ್ರ ಪ್ರೇರೇಪಣೆ ನೀಡುತ್ತದೆ. ಫಾಕ್ಸ್ ಸ್ಟಾರ್‌ ಸ್ಟುಡಿಯೊ ಮುಂಗಡ ಬುಕ್ಕಿಂಗ್‌ ಆರಂಭಿಸಿದೆ. ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಸ್ತುತ ಸಲ್ಮಾನ್‌ ಖಾನ್ ಅಭಿನಯದ ರೇಸ್‌ 3 ಚಿತ್ರಮಂದಿರಗಳಲ್ಲಿದ್ದು, ತುಸು ಸ್ಪರ್ಧೆಯೊಡ್ಡಬಹುದು. ರೇಸ್‌ 3 ಬಿಡುಗಡೆಯಾದ ಎರಡು ವಾರಗಳ ನಂತರ ‘ಸಂಜು’ ತೆರೆ ಕಾಣುತ್ತಿದೆ ಎಂದಿದ್ದಾರೆ.

‘ಸಂಜು’ ಚಿತ್ರದಲ್ಲಿ ರಣಬೀರ್‌ ಕಪೂರ್ ಅವರು ಸಂಜಯ್‌ ದತ್‌ ಅವರ ಪಾತ್ರಕ್ಕೆ ಜೀವತುಂಬಿದ್ದಾರೆ. ರಾಜ್‌ ಕುಮಾರ್‌ ಹಿರಾನಿ ಅವರು ದೊಡ್ಡ ಮೊತ್ತದ ವಾಣಿಜ್ಯ ಚಿತ್ರಗಳಿಗೆ ಹೆಸರುವಾಸಿಯಾಗಿದ್ದು, ಅವರ ಚಿತ್ರಗಳು ವಿಭಿನ್ನವಾಗಿಯೇ ಇರುತ್ತವೆ.  

ಸಂಜಯ್‌ ದತ್‌, ರಾಜ್‌ ಕುಮಾರ್‌ ಹಿರಾನಿ ಜೀವನ ಬದಲಿಸಿದ ಚಿತ್ರ ಮುನ್ನಾ ಭಾಯಿ ಎಂಬಿಬಿಎಸ್‌
ಮುನ್ನಾ ಭಾಯಿ ಎಂಬಿಬಿಎಸ್ ನಟ ಸಂಜಯ್ ದತ್‌ ಮತ್ತು ನಿರ್ದೇಶಕ ರಾಜ್‌ ಕುಮಾರ್‌ ಹಿರಾನಿ ಅವರ ಜೀವನವನ್ನೇ ಬದಲಿಸಿದ ಚಿತ್ರ. 

ಈ ಚಿತ್ರ ಇಬ್ಬರಿಗೂ ಒಂದು ಹೆಗ್ಗುರುತಿತಾಗಿತ್ತು. ಇದು ಹಿರಾನಿ ಅವರನ್ನು ನಿರ್ದೇಶಕರಾಗಿ ರೂಪಿಸಿ, ನಟ ಸಂಜಯ್‌ ದತ್‌ ಅವರ ವೃತ್ತಿ ಬದುಕನ್ನು ಪುನರ್‌ ನಿರ್ಮಿಸಿತು.

ಮುನ್ನಾ ಭಾಯಿ ಎಂಬಿಬಿಎಸ್‌ ಬಿಡುಗಡೆಯಾದ 15 ವರ್ಷಗಳ ನಂತರ ಇಡೀ ತಲೆಮಾರಿನಲ್ಲಿ ಸಂಜಯ್‌ ದತ್‌ಗೆ ಪ್ರೀತಿಪಾತ್ರವಾದದ್ದು ಮುನ್ನಾ. ಈ ಚಿತ್ರವು ಸಂಜಯ್‌ ದತ್‌ ಅವರ ವೃತ್ತಿಜೀವನವನ್ನು ಮತ್ತು ವರ್ಚಸ್ಸನ್ನು ಮುನ್ನೆಲೆಗೆ ತಂದಿತು.

90ರ ದಶಕ ಮತ್ತು ನಂತರ ದಶಕದ ಆರಂಭದಲ್ಲಿ ಸಂಜಯ್‌ ದತ್‌ ಅವರ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದರು ಮತ್ತು ಅವುಗಳು ಪ್ರೇಕ್ಷಕ ವರ್ಗದ ಮೇಲೆ ಪ್ರಭಾ ಬೀರಿ ಆಳವಾಗಿ ಬೇರೂರಿದ್ದವು. ಈ ಕುರಿತು ಇಂಡಿಯನ್‌ ಎಕ್ಸ್‌ಪ್ರಸ್‌ ವರದಿ ಮಾಡಿದೆ.

2003ರಲ್ಲಿ ಮುನ್ನಾ ಭಾಯಿ ಎಂಬಿಬಿಎಸ್‌ ತೆರೆಕಾಣುವ ಮುನ್ನ ಸಂಜಯರ್ ದತ್‌ ಅವರ ಸ್ಮರಣೀಯ ಅಭಿನಯ ಕಾಣಿಸಿದ್ದು 1999ರಲ್ಲಿ ತೆರೆಕಂಡ ವಾಸ್ತವ್‌ ಚಿತ್ರದಲ್ಲಿ. ಸಂಜಯ್‌ ಅವರ ಅಭಿನಯಿಸಿದ್ದು ‘ಬ್ಯಾಡ್‌ ಭಾಯ್‌’ ಹುಡುಗನ ಪಾತ್ರದಲ್ಲಿ. ಡೇವಿಡ್‌ ಧವನ್‌ ಅವರ ‘ಕಾಮಿಕ್‌ ಕ್ಯಾಪರ್ಸ್‌’ ಸಹ ಅಷ್ಟೇನು ಹೆಸರು ನೀಡಲಿಲ್ಲ. ಆದರೆ, ಮುನ್ನಾ ಭಾಯ್‌ ಸಂಜಯ್‌ ಅವರಿಗೆ ಹೊಸದೊಂದು ತಿರುವನ್ನು ನೀಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು