ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ‘ಸಂಜು ವೆಡ್ಸ್ ಗೀತಾ’

Published 4 ಜನವರಿ 2024, 23:31 IST
Last Updated 4 ಜನವರಿ 2024, 23:31 IST
ಅಕ್ಷರ ಗಾತ್ರ

ಶ್ರೀನಗರ ಕಿಟ್ಟಿ, ರಚಿತಾ ರಾಮ್‌ ಜೋಡಿಯ ‘ಸಂಜು ವೆಡ್ಸ್ ಗೀತಾ–2’ ಚಿತ್ರದ ಎರಡು ಹಾಡುಗಳನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. 

‘ನಾಲ್ಕು ತಿಂಗಳ‌ ಹಿಂದೆ ಪ್ರಾರಂಭವಾಗಿದ್ದ ಚಿತ್ರದ ಚಿತ್ರೀಕರಣ ಪ್ರಮುಖ ಘಟ್ಟಕ್ಕೆ ಬಂದಿದೆ. ಈ ಚಿತ್ರ ಮೊದಲ ಭಾಗಕ್ಕಿಂತ ಚೆನ್ನಾಗಿ, ವೈಭವಯುತವಾಗಿ ಮೂಡಿಬರುತ್ತಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಉಳಿದ ಹಾಡುಗಳನ್ನು ಮುಂಬೈ, ಹೈದರಾಬಾದ್‌ನಲ್ಲಿ ಚಿತ್ರೀಕರಿಸಿ 2024ರ ಏಪ್ರಿಲ್ 1ರಂದು ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ’ ಎಂದರು ನಿರ್ದೇಶಕ ನಾಗಶೇಖರ್‌.

ಮಹಾನಂದಿ ಕ್ರಿಯೇಶನ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ.

‘ಸ್ವಿಟ್ಜರ್ಲೆಂಡ್‌ನ ಕೊರೆಯುವ ಚಳಿಯಲ್ಲಿ ಚಿತ್ರೀಕರಿಸಿದ್ದು ಒಂದು ಅನನ್ಯ ಅನುಭವ. ಮೊದಲ ಭಾಗದಲ್ಲಿ ಹಾಡುಗಳು ಹಿಟ್‌ ಆಗಿದ್ದವು. ಅದೇ ರೀತಿ ಈ ಚಿತ್ರದಲ್ಲಿಯೂ ಹಾಡುಗಳು ಅದ್ಭುತವಾಗಿವೆ. ಚಿತ್ರೀಕರಣ ಕೂಡ ದೃಶ್ಯ ವೈಭವ’ ಎಂದರು ನಾಯಕ ಶ್ರೀನಗರ ಕಿಟ್ಟಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT