ಶಾಹಿದ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ

ಚಿತ್ರೀಕರಣದ ವೇಳೆ ತುಟಿಗೆ ಪೆಟ್ಟು ಮಾಡಿಕೊಂಡು ಬಿಡುವಿನಲ್ಲಿರುವ ನಟ ಶಾಹಿದ್ ಕಪೂರ್, ಮನೆಯಲ್ಲಿ ಲೋಹ್ರಿ (ಸಂಕ್ರಾಂತಿ) ಹಬ್ಬ ಆಚರಿಸುತ್ತಿದ್ದಾರೆ. ತಮ್ಮ ಕುಟುಂಬದೊಂದಿಗೆ ಕಾಲಕಳೆಯುತ್ತಾ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ.
ಮನೆಯಲ್ಲಿ ಲೋಹ್ರಿ ಆಚರಣೆ ಪರಿಯನ್ನು ಶಾಹಿದ್ ಪತ್ನಿ ಮೀರಾ ರಜಪೂತ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಂಜೆ ಫೈರ್ ಕ್ಯಾಂಪ್ ಹಾಕಿಕೊಂಡು ಬಗೆಬಗೆಯ ದೀಪಗಳ ಅಲಂಕಾರ, ಕಡಲೆ ಮಿಠಾಯಿ ಸಿಹಿಯೊಂದಿಗೆ ಶಾಹಿದ್ ಹಾಗೂ ತಮ್ಮ ಗೆಳೆಯರು ಹಾಗೂ ಕುಟುಂಬದವರೊಂದಿಗೆ ಹಬ್ಬ ಆಚರಿಸುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಲೋಹ್ರಿ ಹಬ್ಬದ ಶುಭಾಶಯ ಕೋರಿರುವ ಶಾಹಿದ್ ಕಪೂರ್ ‘ನನ್ನ ಆರೋಗ್ಯದ ಬಗ್ಗೆ ಕಾಳಜಿ ಮಾಡಿರುವ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ.
ಇದನ್ನೂ ಓದಿ: ಶಾಹಿದ್ಗೆ ಪೆಟ್ಟು, ಹೃತಿಕ್ಗೆ ಸರ್ಜರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.