ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಸೆಟ್ಟೇರಲಿದೆ ‘ಸಪ್ತಸಾಗರದಾಚೆಯೆಲ್ಲೋ...’

Last Updated 31 ಅಕ್ಟೋಬರ್ 2020, 13:36 IST
ಅಕ್ಷರ ಗಾತ್ರ

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ತಂಡದ ಹೊಸ ಪ್ರಾಜೆಕ್ಟ್‌ ‘ಸಪ್ತ ಸಾಗರದಾಚೆಯೆಲ್ಲೋ...’ ಮುುಂದಿನ ಜನವರಿ ವೇಳೆಗೆ ಸೆಟ್ಟೇರಲಿದೆ. ಇದು ರೊಮ್ಯಾಂಟಿಕ್‌ ಕಥಾ ವಸ್ತುವನ್ನು ಒಳಗೊಂಡ ಚಿತ್ರ. ಹೇಮಂತ್‌ ಎಂ. ರಾವ್‌ಮತ್ತು ರಕ್ಷಿತ್‌ ಶೆಟ್ಟಿ ಪ್ರಧಾನ ಭೂಮಿಕೆಯಲ್ಲಿದ್ದಾರೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ಹೊಸ ಚಿತ್ರದ ಬಗ್ಗೆ ಕಳೆದ ಮಾರ್ಚ್‌ನಲ್ಲೇಚಿತ್ರತಂಡ ಹೇಳಿಕೊಂಡಿತ್ತು.ಆದರೆ, ಕೋವಿಡ್‌ ಕಾರಣಕ್ಕೆ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾದವು.‌ ಈಗ ಹೇಮಂತ್‌ ಅವರು ಚಿತ್ರಕಥೆ ಬರೆಯುವುದರಲ್ಲಿ ಬ್ಯುಸಿ. ರಕ್ಷಿತ್‌ ಶೆಟ್ಟಿ ಅವರು ತಮ್ಮ ಚಿತ್ರ ‘ಚಾರ್ಲಿ777’ನ ಕೆಲಸಗಳನ್ನು ಮುಗಿಸಲಿದ್ದಾರೆ. ಈ ವೇಳೆಗೆ ಹಳೆಯ ತಂಡ (ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ತಂಡ) ಮತ್ತೆ ಹೊಸ ಚಿತ್ರದಲ್ಲಿ ಸೇರಲಿದೆ ಎಂಬುದು ಚಿತ್ರತಂಡದ ಹೇಳಿಕೆ.

‘ಚಿತ್ರದ ಕಥೆಯ ಕೆಲವು ಅಂಶಗಳ ಬಗ್ಗೆ ಅಧ್ಯಯನಕ್ಕಾಗಿ ಜೈಲುಗಳಿಗೂ ಭೇಟಿ ನೀಡಬೇಕಾಗಿತ್ತು. ಕೋವಿಡ್‌ ನಿರ್ಬಂಧದ ಕಾರಣಕ್ಕೆ ಇದು ಸಾಧ್ಯವಾಗಿರಲಿಲ್ಲ. ಮುಂದೆ ಇನ್ನೂ ಅನೇಕ ಸ್ಥಳಗಳಿಗೆ ಭೇಟಿ ನೀಡಬೇಕಿದೆ’ ಎಂದು ಹೇಮಂತ್‌ ಹೇಳಿದರು.

ಹಿಂದೆ ಒಂದಿಷ್ಟು ಗಟ್ಟಿ ಕಥಾ ವಸ್ತುಗಳುಳ್ಳ ಚಿತ್ರಗಳು ಬಂದಿದ್ದವು. ಬಂಧನ, ಮೌನರಾಗ, ಬೆಂಕಿಯ ಬಲೆ, ಬೆಳದಿಂಗಳ ಬಾಲೆ ಅಂಥ ಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ. ಈ ಚಿತ್ರವೂ ಅದೇ ಸಾಲಿನಲ್ಲಿ ಇರಲಿದೆ ಎಂದು ಹೇಮಂತ್‌ ಹೇಳಿದರು. ಹೊಸ ಚಿತ್ರಕ್ಕೆ ಚರಣ್‌ರಾಜ್‌ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT