ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿಯಾಗಲಿದ್ದಾರಾ ಸಾರಾ–ಕಾರ್ತಿಕ್‌?

Last Updated 30 ಜುಲೈ 2019, 19:45 IST
ಅಕ್ಷರ ಗಾತ್ರ

ಅಕ್ಷಯ್‌ ಕುಮಾರ್ ನಟನೆಯ ಸಿನಿಮಾ ‘ಭೂಲ್‌ ಭುಲೈಯಾ’ ಬಾಲಿವುಡ್‌ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾದ ಎರಡನೇ ಅವತರಿಣಿಕೆ ಬಿಡುಗಡೆ ಮಾಡಲು ಈಗ ಸಿದ್ಧತೆ ನಡೆದಿದೆ.

‘ಭೂಲ್‌ ಭುಲೈಯಾ 2’ ನಲ್ಲಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಈಗ ಬಾಲಿವುಡ್‌ ಅಂಗಳದಲ್ಲಿದೆ. ಅಕ್ಷಯ್‌ ಪಾತ್ರವನ್ನು ಕಾರ್ತಿಕ್‌ ಆರ್ಯನ್ ಮಾಡಲಿರುವುದು ಬಹುತೇಕ ಖಚಿತಗೊಂಡಿದೆ. ಆದರೆ ನಾಯಕಿಯ ಪಾತ್ರಕ್ಕೆ ಸಾರಾ ಅಲಿ ಖಾನ್‌ಗೆ ನಿರ್ಮಾಪಕರು ಮಣೆಹಾಕುತ್ತಿದ್ದಾರಂತೆ. ಬೇರೆ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಯುವ ನಟಿ ಇನ್ನೂ ಸಹಿ ಹಾಕಿಲ್ಲ. ಅನೀಸ್‌ ಬಜ್ಮೀ ನಿರ್ದೇಶನದ ಈ ಸಿನಿಮಾದಲ್ಲಿ ಅನನ್ಯಾ ಪಾಂಡೆ ನಟಿಸಲಿದ್ದಾರೆ ಎಂಬ ಗುಸು ಗುಸು ಇತ್ತು. ಆದರೆ ಈಗ ಚೆಂಡು ಸಾರಾಳ ಅಂಗಳದಲ್ಲಿದೆ.

ಇಮ್ತಿಯಾಜ್‌ ಅಲಿ ಅವರ ನಿರ್ದೇಶನದ ಹೆಸರಿಡದ ಸಿನಿಮಾ ಒಂದರಲ್ಲಿ ಸಾರಾ–ಕಾರ್ತಿಕ್‌ ಜೋಡಿ ಈಗಾಗಲೇ ಒಟ್ಟಿಗೆ ನಟಿಸುತ್ತಿದೆ. ದೀಪಿಕಾ ಪಡುಕೋಣೆ ಹಾಗೂ ಸೈಫ್‌ ಅಲಿ ಖಾನ್ ನಟನೆಯ ‘ಲವ್‌ ಆಜ್‌ ಕಲ್‌’ ಸಿನಿಮಾದ ಮುಂದುವರಿದ ರೂಪ ಇದಾಗಿದೆ ಎಂದೂ ಹೇಳಲಾಗುತ್ತಿದೆ. ಈ ಸಿನಿಮಾಕ್ಕೆ ‘ಆಜ್‌ ಕಲ್‌’ ಎಂದು ಹೆಸರಿಡುವ ಸಾಧ್ಯತೆ ಕೂಡ ಇದೆಯಂತೆ. ‘ಕೂಲಿ ನಂ 1’ನಲ್ಲಿಯೂ ಸಾರಾ ನಟಿಸುವುದು ಖಚಿತಗೊಂಡಿದೆ. ‘ಪತಿ ಪತ್ನಿ ಔರ್‌ ವೋ’ ಸಿನಿಮಾದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT