ಅತರಂಗಿ ರೇ ಚಿತ್ರದಲ್ಲಿನ ನನ್ನ ಪಾತ್ರ ಮಹಿಳೆಯರಿಗೆ ಇಷ್ಟವಾಗಲಿದೆ: ಸಾರಾ ಅಲಿ ಖಾನ್

ಬೆಂಗಳೂರು: ಅಕ್ಷಯ್ ಕುಮಾರ್ ಮತ್ತು ಧನುಷ್ ಅಭಿನಯದ ಅತರಂಗಿ ರೇ ಚಿತ್ರದಲ್ಲಿ ‘ರಿಂಕು‘ ಪಾತ್ರದಲ್ಲಿ ಸಾರಾ ಅಲಿ ಖಾನ್ ನಟಿಸಿದ್ದಾರೆ.
ಈ ಪಾತ್ರವನ್ನು ಎಲ್ಲ ಮಹಿಳೆಯರು ಇಷ್ಟಪಡುತ್ತಾರೆ ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸೈಫ್ ಅಲಿ ಖಾನ್ ಪುತ್ರಿ ಸಾರಾ, ‘ರಿಂಕು ಪಾತ್ರವನ್ನು ನಾನು ಪೂರ್ತಿಯಾಗಿ ಆವರಿಸಿಕೊಂಡುಬಿಟ್ಟಿದ್ದೆ. ರಿಂಕು ಪಾತ್ರವೇ ಹಾಗಿತ್ತು. ಅದನ್ನು ನಿಭಾಯಿಸುವುದು ಕೂಡ ಸವಾಲಾಗಿತ್ತು‘ ಎಂದು ಹೇಳಿದ್ದಾರೆ.
ಅತರಂಗಿ ರೇ ಚಿತ್ರವನ್ನು ಆನಂದ್ ಎಲ್. ರೈ ಅವರು ನಿರ್ದೇಶಿಸಿದ್ದು, ರಿಂಕು ಪಾತ್ರವನ್ನು ನಾನು ಸಮರ್ಥವಾಗಿ ನಿರ್ವಹಿಸುವಂತೆ ನೋಡಿಕೊಂಡರು. ಹೀಗಾಗಿ ನನಗೆ ಪಾತ್ರದ ಮೇಲೆ ಪ್ರೀತಿ ಉಂಟಾಗಿತ್ತು ಎಂದು ಅವರು ಹೇಳಿದ್ದಾರೆ.
ಮಾಡೆಲಿಂಗ್ ಮತ್ತು ಸಿನಿಮಾ ಕ್ಷೇತ್ರದಲ್ಲಿ ಮಿಂಚಿದ ನಟಿ ನರ್ಗಿಸ್ ಫಕ್ರಿ
ಇಂದಿನ ದಿನಗಳಲ್ಲಿ ಪ್ರತಿ ಮಹಿಳೆ ಕೂಡ ರಿಂಕು ಪಾತ್ರವನ್ನು ಇಷ್ಟಪಡುತ್ತಾಳೆ. ಚಿತ್ರದಲ್ಲಿ ರಿಂಕು ನಿಭಾಯಿಸುವ ಪಾತ್ರದಂತೆಯೇ ಬಹುತೇಕರ ಜೀವನ ಇರುತ್ತದೆ ಎಂದು ಸಾರಾ ತಿಳಿಸಿದ್ದಾರೆ.
ಹೊಸ ಉಡುಪು ಧರಿಸಿ ಟ್ರೋಲ್ಗೆ ಸಿಲುಕಿದ ನಟಿ ದಿಶಾ ಪಟಾನಿ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.