ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾಳೇಶ್ವರ ದೇವಸ್ಥಾನ ಭೇಟಿ; ಟ್ರೋಲ್‌ ಮಾಡಿದವರಿಗೆ ಸಾರಾ ಅಲಿ ಖಾನ್‌ ತಿರುಗೇಟು

Published 1 ಜೂನ್ 2023, 11:10 IST
Last Updated 1 ಜೂನ್ 2023, 11:10 IST
ಅಕ್ಷರ ಗಾತ್ರ

ಬಾಲಿವುಡ್ ನಟ ಸೈಫ್‌ ಅಲಿ ಖಾನ್‌ ಮಗಳು ಸಾರಾ ಅಲಿ ಖಾನ್‌ ತಮ್ಮ ಪ್ರಬುದ್ಧ ನಟನೆಯ ಮೂಲಕವೇ ಬಾಲಿವುಡ್‌ನಲ್ಲಿ ಭರವಸೆಯ ನಟಿ ಎನಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸಾರಾ, ಇದೀಗ ‘ಝರಾ ಹಟ್ಕೆ ಝರಾ ಬಚ್ಕೆ‘ ಚಿತ್ರದ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಚಿತ್ರದ ಪ್ರಮೋಶನ್‌ ವೇಳೆ ಸಾರಾ ಅಲಿ ಖಾನ್‌ ತಮ್ಮ ಸಹನಟ ವಿಕ್ಕಿ ಕೌಶಲ್‌ ಅವರೊಂದಿಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭೇಟಿ ವೇಳೆ ಭಸ್ಮ ಆರತಿ, ಜಲಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಅವರು ಲಕ್ನೋದ ಒಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಅಜ್ಮರ್ ಶರೀಫ್‌ ದರ್ಗಾಕ್ಕೂ ಹೋಗಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ದೇವಸ್ಥಾನ ಭೇಟಿ ಸಂಬಂಧ ಸಾರಾ ಅಲಿ ಖಾನ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದ್ದರು.

‘ಝರಾ ಹಟ್ಕೆ ಝರಾ ಬಚ್ಕೆ‘ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಾರಾ ಅಲಿ ಖಾನ್‌ ದೇವಸ್ಥಾನ ಭೇಟಿ ಕುರಿತ ಟ್ರೋಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ನನ್ನ ಕೆಲಸದ ಬಗೆಗೆ ಹೆಚ್ಚು ಯೋಚಿಸುತ್ತೇನೆ. ಜನರು ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದಿದ್ದರೆ ಅದು ನನಗೆ ಬೇಸರ ತರಿಸುತ್ತದೆ. ಭಕ್ತಿ ನಂಬಿಕೆಗಳು ನನ್ನ ವೈಯಕ್ತಿಕ ವಿಚಾರಗಳಾಗಿವೆ. ಅಜ್ಮರ್‌ ಶರೀಫ್‌ ದರ್ಗಾಕ್ಕೆ ಹೋದಾಗ ಯಾವ ಭಕ್ತಿ ಇರುತ್ತದೋ ಅದೇ ಭಕ್ತಿ ಬಾಂಗ್ಲಾ ಸಾಹಿಬ್‌, ಮಹಾಕಾಳೇಶ್ವರಕ್ಕೆ ಭೇಟಿ ನೀಡಿದಾಗಲೂ ಇರುತ್ತದೆ‘ ಎಂದರು.

‘ಜನ ಏನು ಬೇಕಾದರೂ ಹೇಳಬಹುದು, ಅದರಿಂದ ನಾನು ವಿಚಲಿತಳಾಗುವುದಿಲ್ಲ. ಆ ಸ್ಥಳಗಳಲ್ಲಿ ಒಂದು ತೆರನಾದ ಧನಾತ್ಮಕ ಶಕ್ತಿಯಿದ್ದು, ನಾನು ಆ ಶಕ್ತಿಯನ್ನು ನಂಬುತ್ತೇನೆ. ನೀವು ಅದನ್ನು ಅನುಭವಿಸಬೇಕು‘ ಎಂದರು.

ಬಾಲಿವುಡ್‌ನಲ್ಲಿ ಬ್ಯುಸಿ ನಟಿ ಎನಿಸಿಕೊಂಡಿರುವ ಸಾರಾ ಅಲಿ ಖಾನ್‌, ಲಕ್ಷ್ಮಣ್ ಉಟೇಕರ್ ಅವರ ಮುಂದಿನ ಚಿತ್ರ ‘ಏ ವತನ್ ಮೇರೆ ವತನ್‘ ಮತ್ತು ಅನುರಾಗ್ ಬಸು ಅವರ ‘ಮೆಟ್ರೋ ಇನ್ ಡಿನೋ‘ ಚಿತ್ರದಲ್ಲಿಯೂ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT