ಸುವರ್ಣಾವಕಾಶ ಕಲ್ಪಿಸಲು ರಿಷಿ ಸಜ್ಜು

ಸೋಮವಾರ, ಜೂನ್ 17, 2019
22 °C

ಸುವರ್ಣಾವಕಾಶ ಕಲ್ಪಿಸಲು ರಿಷಿ ಸಜ್ಜು

Published:
Updated:
Prajavani

‘ಆಪರೇಷನ್‌ ಅಲಮೇಲಮ್ಮ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು ನಟ ರಿಷಿ. ಅವರು ನಟಿಸಿದ ಎರಡನೇ ಚಿತ್ರ ‘ಕವಲುದಾರಿ’ಯೂ ಪ್ರೇಕ್ಷಕರ ಮನಗೆದ್ದಿದೆ. ಈ ನಡುವೆ ರಿಷಿ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಕಲ್ಪಿಸಲು ರೆಡಿಯಾಗಿದ್ದಾರೆ. ಅದು ಏನು ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಇದು ಆಧುನಿಕ ಯುಗ. ಪ್ರತಿಯೊಬ್ಬರು ಒಂದೊಂದು ವಸ್ತುವಿನ ಮೇಲೆ ಆಸೆಪಡುವುದು ಸಹಜ. ಇದರ ಸುತ್ತವೇ ಈ ಚಿತ್ರದ ಕಥೆ ಸಾಗಲಿದೆಯಂತೆ. ಚಿತ್ರ ನಾಯಕ ತನ್ನ ಪ್ರೇಯಸಿಗಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತಾನೆ. ಆಗ ಆತ ಒಂದು ಘಟನೆಯಲ್ಲಿ ಸಿಲುಕುತ್ತಾನೆ. ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾನೆ ಎನ್ನುವುದೇ ಈ ಚಿತ್ರದ ತಿರುಳು. 

ಈ ಚಿತ್ರದಲ್ಲಿ ರಿಷಿಗೆ ಧನ್ಯಾ ಬಾಲಕೃಷ್ಣ ಸಾಥ್‌ ನೀಡಿದ್ದಾರೆ. ಇತ್ತೀಚೆಗೆ ಚಿತ್ರದ ಮಾತಿನ ಮರುಲೇಪನ ಕಾರ್ಯ ಬಾಲಾಜಿ ಸ್ಟುಡಿಯೊದಲ್ಲಿ ಮುಕ್ತಾಯವಾಯಿತು. ಇನ್ನು ಮೂರು ಹಾಡುಗಳು ಹಾಗೂ ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆಯಂತೆ. ಇದೇ ತಿಂಗಳಿನಲ್ಲಿ ಶೂಟಿಂಗ್‌ ಮುಗಿಯಲಿದೆ ಎಂದು ಚಿತ್ರತಂಡ ಹೇಳಿದೆ.

ಅನೂಪ್ ರಾಮಸ್ವಾಮಿ ಕಶ್ಯಪ್ ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ, ಹರಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ ವಿಜ್ಞೇಶ್‌ ರಾಜ್ ಅವರದ್ದು.

ಐದು ಹಾಡುಗಳಿಗೆ ಮಿಧುನ್‌ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಆರ್. ದೇವರಾಜ್‌, ಪ್ರಶಾಂತ್‌ ರೆಡ್ಡಿ, ಜನಾರ್ದನ್‌ ಚಿಕ್ಕಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿದ್ದು ಮೂಲಿಮನಿ, ದತ್ತಣ್ಣ, ರಂಗಾಯಣ ರಘು, ಶೀನು, ಮಿತ್ರ, ಶಾಲಿನಿ ತಾರಾಗಣದಲ್ಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !