ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀತಿ ಹಂಚಿದ ಎಸ್‌ಆರ್‌ಕೆ ಅಭಿಮಾನಿಗಳ ಸಂಘ

Published 28 ಜೂನ್ 2024, 21:42 IST
Last Updated 28 ಜೂನ್ 2024, 21:42 IST
ಅಕ್ಷರ ಗಾತ್ರ

ಬಾಲಿವುಡ್‌ ಬಾದ್‌ಷಾ ಅಂತಲೇ ಹೆಸರಾಗಿರುವ ಕಿಂಗ್‌ ಖಾನ್‌ ಎಂದು ಜನಪ್ರಿಯರಾಗಿರುವ ಶಾರುಖ್‌ ಖಾನ್‌, ಸಿನಿಮಾ ರಂಗ ಪ್ರವೇಶಿಸಿ 32 ವರ್ಷಗಳಾದವಂತೆ. ಈ ಸಂಭ್ರಮವನ್ನು ಪುಣೆಯ ಶಾರುಖ್‌ ಖಾನ್‌ ವಾರಿಯರ್ಸ್‌ ಫ್ಯಾನ್‌ ಕ್ಲಬ್‌ ಎಂಬ ಅಭಿಮಾನಿಗಳ ಸಂಘ ವಿಶೇಷವಾಗಿ ಆಚರಿಸಿದೆ.

ಶಾರುಖ್‌ರ ಅತ್ಯುತ್ತಮ, ಜನಪ್ರಿಯ ಚಿತ್ರಗಳನ್ನು ಗುರುತಿಸಿ, ಅವುಗಳ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಿದೆ. ಅಗತ್ಯ ಇದ್ದವರಿಗೆ ಬೆಚ್ಚನೆಯ ಹೊದಿಕೆಗಳನ್ನು ಹಂಚಿದೆ. ಕೇಕು ಕಟ್‌ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದೆ. ಅವರ ಸಂಭ್ರಮದ ವಿಡಿಯೊವನ್ನು ಎಕ್ಸ್‌ ವೇದಿಕೆಯಲ್ಲಿ ಹಂಚಿದ ಕೂಡಲೇ ಲಕ್ಷದಷ್ಟು ಹಿಟ್‌ ಕಂಡಿವೆ. ಸಾಕಷ್ಟು ಜನ ಅಭಿಮಾನಿಗಳು ಶಾರುಖ್‌ಖಾನ್‌ಗೆ ತಮ್ಮ ಪ್ರೀತಿಯನ್ನೂ ಇಲ್ಲಿ ತೋರ್ಪಡಿಸಿದ್ದಾರೆ.

ರಂಗಭೂಮಿಯ ಹಿನ್ನೆಲೆ ಇದ್ದ ಶಾರುಖ್‌ ಖಾನ್‌ ಟೀವಿ ಧಾರಾವಾಹಿ ಫೌಜಿಯಿಂದ ತಮ್ಮ ಕೆರಿಯರ್‌ ಆರಂಭಿಸಿದ್ದರು. ದೀವಾನಾ ಚಿತ್ರ ಅವರ ಮೊದಲ ಚಿತ್ರವಾಗಿತ್ತು. ನಂತರ ಡರ್‌, ಬಾಜಿಗರ್‌ ಚಿತ್ರಗಳಲ್ಲಿ ನೆಗೆಟಿವ್‌ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ (ಡಿಡಿಎಲ್‌ಜೆ) ಅತಿ ಹೆಚ್ಚು ಪ್ರದರ್ಶನ ಕಂಡ ಚಿತ್ರವೂ ಆಗಿದೆ. ನಂತರದ ಕುಛ್‌ ಕುಛ್‌ ಹೋತಾ ಹೈ, ದಿಲ್‌ ತೊ ಪಾಗಲ್‌ ಹೈ, ಕಭಿ ಖುಷಿ ಕಭಿ ಗಮ್‌, ಕಲ್‌ ಹೋ ನಾ ಹೋ ಮುಂತಾದ ಹಿಟ್‌ ಚಿತ್ರಗಳ ನಂತರ ರೊಮ್ಯಾಂಟಿಕ್‌ ಹೀರೊ ಎಂಬ ಪಟ್ಟವನ್ನು ಪಡೆದರು. ಆನಂತರ ಶಾರುಖ್‌ ಖಾನ್‌ ಕಾಮೆಡಿ, ಆ್ಯಕ್ಷನ್‌ ಸಿನಿಮಾಗಳಲ್ಲಿಯೂ ನಟಿಸಿ ಸೈ ಅನಿಸಿಕೊಂಡರು.

ಶ್ರದ್ಧೆ ಮತ್ತು ಬದ್ಧತೆ ಇದ್ದರೆ ಯಾರಾದರೂ ಯಶಸ್ವಿಯಾಗಬಹುದು ಎಂದು ತಮ್ಮ ಟೆಡ್‌ ಟಾಕ್‌ಗಳಲ್ಲಿ ಮತ್ತಿತರ ಸಂದರ್ಶನಗಳಲ್ಲಿ ಹೇಳುವ ಶಾರುಖ್‌ ತಮ್ಮ ಪಯಣದ ಕುರಿತು ಆಗಾಗ ಹೇಳುತ್ತಲೇ ಇರುತ್ತಾರೆ. 
59ರ ಹರೆಯದ ಶಾರುಖ್‌ ಖಾನ್‌ ಅವರ 32 ವರ್ಷಗಳ ಪಯಣವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಪ್ರತಿ ಸಂದರ್ಶನದಲ್ಲಿಯೂ ಮಹಿಳೆಯರನ್ನು ಗೌರವಿಸಿ ಎಂದು ಹೇಳುವ ಶಾರುಖ್‌ ಖಾನ್‌ ಅದನ್ನು ತಮ್ಮ ಸಿನಿಮಾಗಳಲ್ಲಿಯೂ ಪಾಲಿಸಿಕೊಂಡು ಬಂದಿದ್ದಾರೆ. ಮಹಿಳೆಯರನ್ನು ಗೌರವದಿಂದ ಕಾಣುವುದೇ ಅತಿ ರೊಮ್ಯಾಂಟಿಕ್‌ ವಿಷಯ ಎಂದು ಅವರು ಟೀವಿ ಸಂದರ್ಶನದಲ್ಲಿಯೂ ಹೇಳಿದ್ದರು. ಅಭಿಮಾನಿಗಳ ಪ್ರೀತಿ ಸಕಾರಾತ್ಮಕ ಕೆಲಸಗಳಲ್ಲಿ ಕಾಣಿಸಿಕೊಳ್ಳಲಿ, ಅಭಿಮಾನಿಗಳು ತಮ್ಮ ಕನಸುಗಳನ್ನು ನನಸಾಗಿಸಲಿ ಎಂದೂ ಅವರು ಆಪ್‌ಕಿ ಅದಾಲತ್‌ನಲ್ಲಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.

ಆರ್ಯನ್‌ ಖಾನ್‌, ಸುಹಾನಾ ಖಾನ್‌ ಮತ್ತು ಅಬ್ರಾಮ್‌ ಅವರ ಮಕ್ಕಳಾಗಿದ್ದಾರೆ. ಆರ್ಚೀಸ್‌ ಸಿನಿಮಾ ಮೂಲಕ ಸುಹಾನಾ ಸಿನಿಮಾ ಜಗತ್ತನ್ನು ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT