ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ನಟನೆಯ ‘ಜವಾನ್’ ಚಿತ್ರ ನ.29ರಂದು ಜಪಾನ್‌ನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಅಟ್ಲಿ ನಿರ್ದೇಶನದ ಈ ಸಿನಿಮಾ 2023ರ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿತ್ತು. ಅಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ₹1,100 ಕೋಟಿ ಗಳಿಕೆ ಮಾಡಿತ್ತು.
ಇದೀಗ ಜಪಾನ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವ ಬಗ್ಗೆ ವರದಿ ಮಾಡಿರುವ ಜಪಾನೀಸ್ ಪೋಸ್ಟ್ ಅನ್ನು ಶಾರುಕ್ ಖಾನ್ ಹಂಚಿಕೊಂಡಿದ್ದಾರೆ.
ಜವಾನ್ ಚಿತ್ರದಲ್ಲಿ ಶಾರುಕ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಕ್ರಮ ರಾಥೋಡ್ ಮತ್ತು ಆತನ ಮಗ ಆಜಾದ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ.
ಜವಾನ್ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗೌರಿ ಖಾನ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಗೌರವ್ ವರ್ಮಾ ಸಹ ನಿರ್ಮಾಪಕರಾಗಿದ್ದಾರೆ