ವ್ಹಾ ವ್ಹಾ ಶಾಹಿದ್‌!

ಶನಿವಾರ, ಏಪ್ರಿಲ್ 20, 2019
24 °C

ವ್ಹಾ ವ್ಹಾ ಶಾಹಿದ್‌!

Published:
Updated:
Prajavani

ಶಾಹಿದ್ ಕಪೂರ್‌ ಟ್ವಿಟರ್‌ ಖಾತೆ ಈಗ ವೀಕ್ಷಕರ ಸಂತೆಯಾಗಿ ಮಾರ್ಪಾಡಾಗಿದೆ. ಸೋಮವಾರ ಮಧ್ಯಾಹ್ನ ’ಕಬೀರ್‌ ಸಿಂಗ್‌‘ ಟೀಸರ್‌ನ್ನು ತಮ್ಮ ಖಾತೆಯಲ್ಲಿ ಪೋಸ್ಟ್‌ ಮಾಡಿದಾಗಿನಿಂದ ಶಾಹಿದ್‌ ಲುಕ್‌ಗೆ ವೀಕ್ಷಕರು ಬಹುಪರಾಕ್ ಹೇಳುತ್ತಿದ್ದಾರೆ.

ತೆಲುಗಿನ ಸೂಪರ್‌ ಡೂಪರ್‌ ಹಿಟ್‌ ಚಿತ್ರ ’ಅರ್ಜುನ್‌ ರೆಡ್ಡಿ‘ಯ ಹಿಂದಿ ರಿಮೇಕ್‌ ಆಗಿರುವ ’ಕಬೀರ್‌ ಸಿಂಗ್‌‘ನ ಪ್ರತಿ ಹಾವಭಾವದಲ್ಲಿಯೂ ಶಾಹಿದ್, ವಿಜಯ್‌ ದೇವರಕೊಂಡ ಅವರನ್ನು ನೆನಪು ಮಾಡಿಕೊಡುತ್ತಾರೆ. 

ಕಿಯಾರಾ ಅಡ್ವಾಣಿಗೆ ಕೊಡುವ ದೀರ್ಘ ಚುಂಬನ, ವಿಜಯ್‌ ಅವರಂತೆ ಬೆಳೆಸಿರುವ ರಾಶಿ ಕೂದಲು ಮತ್ತು ಗಡ್ಡ, ಅಷ್ಟೆತ್ತರ ಸುರುಳಿ ಸುತ್ತುವ ಸಿಗರೇಟು ಹೊಗೆ, ಥೇಟ್‌ ಭಗ್ನಪ್ರೇಮಿಯ ಲುಕ್‌... ಕಬೀರ್ ಸಿಂಗ್ ಅವತಾರ ಶಾಹಿದ್‌ ಅವರನ್ನು ಮನಸಾರೆ ಹೊಗಳುವಂತೆ ಮಾಡುತ್ತದೆ.

ಮಾತು ಕೊಟ್ಟಂತೆ ಯುಗಾದಿಯ ಬೆನ್ನಲ್ಲೇ ಶಾಹಿದ್‌ ಟೀಸರ್ ಬಿಡುಗಡೆ ಮಾಡಿದ್ದಾರೆ. ಇಷ್ಟು ದಿನ ತಾಳ್ಮೆಯಿಂದ ಕಾದ ಅಭಿಮಾನಿಗಳಿಗೆ ಶಾಹಿದ್ ಭರ್ಜರಿ ಔತಣವನ್ನೇ ಉಣಬಡಿಸಿದ್ದಾರೆ. ಕೆಲವು ತಿಂಗಳಿಂದೀಚೆ ಕೂದಲು ಮತ್ತು ಗಡ್ಡ ಅಡ್ಡಾದಿಡ್ಡಿ ಬೆಳೆಸಿಕೊಂಡಿದ್ದ ಈ ಪ್ರತಿಭಾವಂತ ನಟ ಹಿಂದಿಯಲ್ಲೂ ’ಅರ್ಜುನ್‌ ರೆಡ್ಡಿ‘ ಅಬ್ಬರಿಸಲಿದ್ದಾನೆ ಎಂಬ ಮುನ್ಸೂಚನೆ ನೀಡಿದ್ದಾರೆ. ಶರಾಬು ಕುಡಿಯುವ ದೃಶ್ಯಗಳಂತೂ ಭಗ್ನಪ್ರೇಮಿಯ ತೊಳಲಾಟಗಳಿಗೆ ಕನ್ನಡಿ ಹಿಡಿಯುವಂತೆ ಮೂಡಿಬಂದಿವೆ.

ಟೀಸರ್‌ ಆರಂಭವಾಗುತ್ತಿದ್ದಂತೆ ಕಟ್ಟಡವೊಂದರ ಟೆರೇಸ್‌ ಮೇಲೆ ಶಾಹಿದ್ ಕಾಣಿಸಿಕೊಳ್ಳುತ್ತಾರೆ. ಕೈಯಲ್ಲಿ ಸಾರಾಯಿ ಬಾಟಲಿ. ರೋಷಾವೇಷದಿಂದ ಅದರ ಮುಚ್ಚಳ ತೆರೆದು ಅಲ್ಲಿಯೇ ಇದ್ದ ನೀರಿನ ಟ್ಯಾಂಕರ್‌ಗೆ ಸುರಿಯುತ್ತಾರೆ. ಇಡೀ ಟ್ಯಾಂಕರ್‌ನ ನೀರನ್ನು ಕುಡಿಯಲು ಅದು ತಯಾರಿ. ’ಆಲ್ಕೋಹಾಲಿಕ್‌ ಸರ್ಜನ್‘ ಪಾತ್ರದಲ್ಲಿ ಶಾಹಿದ್‌ ಅಭೂತಪೂರ್ವವಾಗಿ ನಟಿಸಿದ್ದಾರೆ. 

ತೆಲುಗಿನಲ್ಲಿ ವಿಜಯ್ ದೇವರಕೊಂಡ ಅವರಿಗೆ ಆ್ಯಕ್ಷನ್– ಕಟ್‌ ಹೇಳಿದ ಸಂದೀಪ್ ವಂಗ ಅವರೇ ಶಾಹಿದ್‌ಗೂ ನಿರ್ದೇಶನ ನೀಡಲಿದ್ದಾರೆ. ಪ್ರೀತಿಸಿ ಕೈಕೊಡುವ ಯುವತಿಯ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ. 

ಒಂದು ಮೂಲದ ಪ್ರಕಾರ, ’ಕಬೀರ್‌ ಸಿಂಗ್‌‘ ಚಿತ್ರದ ಕೆಲವು ಸನ್ನಿವೇಶಗಳಿಗಾಗಿ ದೆಹಲಿಯ ಎಂಟು ಕಾಲೇಜುಗಳಲ್ಲಿ ಲೊಕೇಷನ್‌ ಫಿಕ್ಸ್‌ ಮಾಡಲಾಗಿದೆ.

v

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !