ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಹುನಿರೀಕ್ಷಿತ ‘ಶಕೀಲಾ’ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಇದು ಇಂದ್ರಜಿತ್ ನಿರ್ದೇಶನದ ಚೊಚ್ಚಲ ಬಾಲಿವುಡ್ ಸಿನಿಮಾವೂ ಹೌದು. ಶಕೀಲಾ ಪಾತ್ರಕ್ಕೆ ರಿಚಾ ಚಡ್ಡಾ ಜೀವ ತುಂಬಿದ್ದಾರೆ. ಈ ಚಿತ್ರವು ಹಿಂದಿಯಲ್ಲಿ ಬಿಡುಗಡೆಯಾಗಿದ್ದು ದಕ್ಷಿಣದ ಭಾಷೆಗಳಿಗೆ ಡಬ್ ಆಗಿದೆ.

ಭಾರತದಾದ್ಯಂತ ಬಿಡುಗಡೆಯಾದ ಈ ಚಿತ್ರದಲ್ಲಿ ಬೇರೆ ಬೇರೆ ಸಿನಿಕ್ಷೇತ್ರದ ಖ್ಯಾತ ನಟರು ನಟಿಸಿದ್ದಾರೆ. ಪಂಕಜ್ ತ್ರಿಪಾಠಿ, ಎಸ್ತರ್ ನೊರೊನ್ಹಾ, ರಾಜೀವ್ ಪಿಳೈ, ಸುಚೇಂದ್ರ ಪ್ರಸಾದ್ ಹಾಗೂ ಕಾಜೊಲ್ ಛುಗ್ ಮೊದಲಾದವರು ನಟಿಸಿದ್ದಾರೆ.

ಕೊರೊನಾ ಕಾರಣದಿಂದ ಮುಚ್ಚಿದ ಚಿತ್ರಮಂದಿರಗಳು ಇತ್ತೀಚೆಗೆ ಪುನಃ ಚೇತರಿಸಿಕೊಳ್ಳಲು ಆರಂಭಿಸಿವೆ. ಈ ಸವಾಲಿನ ನಡುವೆಯೂ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಧೈರ್ಯ ತೋರಿದ್ದ ಚಿತ್ರಕ್ಕೆ ಈಗ ಇನ್ನೊಂದು ಶಾಕ್ ಎದುರಾಗಿದೆ.

ಅದೇನೆಂದರೆ ಈ ಚಿತ್ರ ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಚಿತ್ರವು ವಿಡಿಯೊ ಶೇರಿಂಗ್ ಸೈಟ್‌ನಲ್ಲಿ ಲಭ್ಯವಿದೆ. ಸೋರಿಕೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿತ್ರತಂಡ ಯೋಚಿಸಿದ್ದು ಸೋರಿಕೆ ಮಾಡಿದ್ದು ಯಾರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎನ್ನುತ್ತಿವೆ ಮೂಲಗಳು. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲೂ ಅಧಿಕೃತ ಮಾಹಿತಿ ತಿಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.