ಬುಧವಾರ, ಆಗಸ್ಟ್ 4, 2021
22 °C

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಶಾಂತಮ್ಮ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕನ್ನಡ ಚಲನಚಿತ್ರ ರಂಗದ ಪೋಷಕ ನಟಿ ಬಿ.ಶಾಂತಮ್ಮ (94) ಭಾನುವಾರ ನಿಧನರಾದರು.

1956ರಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಶಾಂತಮ್ಮ, 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.  ‘ಹರಿಭಕ್ತ’ ಅವರು ನಟಿಸಿದ ಮೊದಲು ಚಿತ್ರ. ರಜನಿಕಾಂತ್ ಜೊತೆ ನಟಿಸಿದ ‘ಲಿಂಗಂ’ ಕೊನೆಯ ಚಿತ್ರ.

ಗುಬ್ಬಿ ವೀರಣ್ಣ ಅವರ ಪತ್ನಿ ಬಿ.ಜಯಮ್ಮ ಅವರ ಸಹೋದರ ಅನಿಲ್‌ ಕುಮಾರ್‌ ಅವರನ್ನು ವಿವಾಹವಾಗಿದ್ದ ಶಾಂತಮ್ಮ, ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ತಾಯಿ.

‘ಶನಿವಾರ ಊಟ ಮಾಡುವಾಗ ಅವರಿಗೆ ಅನ್ನ ಸೇರಲಿಲ್ಲ. ಸಂಜೆ 4 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಮೈಸೂರು ಸುತ್ತಿದರೂ ಯಾವೊಂದು ನರ್ಸಿಂಗ್‌ ಹೋಂ ನವರೂ ಸೇರಿಸಿಕೊಳ್ಳಲಿಲ್ಲ. ಕೊನೆಗೆ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡರು. ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಸೋಮವಾರ ಮಧ್ಯಾಹ್ನದೊಳಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಸಲಿದ್ದೇವೆ’ ಎಂದು ಅವರ ಪುತ್ರಿ ಸುಮಾ ತಿಳಿಸಿದರು.

ಟ್ವಿಟರ್‌ನಲ್ಲಿ ಗಣ್ಯರ ಕಂಬನಿ

ಶಾಂತಮ್ಮನವರ ಸಾವಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. 

'ನೂರಾರು ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿ ಜನಮನ ಗೆದ್ದಿದ್ದ ಹಿರಿಯ ಕಲಾವಿದೆ ಶಾಂತಮ್ಮ ಅವರ ಅಗಲಿಕೆ ಬಹಳ ದುಃಖಕರ. ಈ ನೋವು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು