ಶನಿವಾರ, ಏಪ್ರಿಲ್ 17, 2021
23 °C

ಶಿವರಾಜ್‌ಕುಮಾರ್‌ ಭೇಟಿ ಮಾಡಿದ ಅನಿಲ್‌ ಕುಂಬ್ಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಅವರು ಲಂಡನ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ನಿನ್ನೆ ಶಿವಣ್ಣ ಲಂಡನ್‌ನಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡರು. 

ಖ್ಯಾತ ಕ್ರಿಕೆಟ್‌ಪಟು ಅನಿಲ್‌ ಕುಂಬ್ಳೆ ಅವರು ಶಿವಣ್ಣ ಅವರ ಹುಟ್ಟುಹಬ್ಬದ ಸಮಾರಂಭಕ್ಕೆ ಭೇಟಿ ನೀಡಿ ಶುಭಾಶಯ ಕೋರಿದ್ದಾರೆ. ಇದನ್ನು ಶಿವಣ್ಣ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

‘ಕ್ರಿಕೆಟ್ ಅಂದ್ರೆ ನನಗೆ ಇಷ್ಟ. ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ surprise ಆಗಿ ಸಿಕ್ಕ ನನ್ನ favourite player ನನ್ನ ಒಳ್ಳೆಯ ಸ್ನೇಹಿತ @anilkumble1074 ನಿಮ್ಮ ಭೇಟಿ ಖುಷಿ ಕೊಡ್ತು’ ಎಂದು ಕುಂಬ್ಳೆ ಜೊತೆಗಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು