ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

MIFF 2024ರಲ್ಲಿ ಪ್ರದರ್ಶನಗೊಳ್ಳಲಿರುವ 'ಕರ್ನಲ್ ಕಲ್ಸಿ' ಕಿರುಚಿತ್ರ​​

Published 17 ಜೂನ್ 2024, 10:53 IST
Last Updated 17 ಜೂನ್ 2024, 10:53 IST
ಅಕ್ಷರ ಗಾತ್ರ

ಮುಂಬೈ: ಧಾರ್ಮಿಕ ತಾರತಮ್ಯದ ವಿರುದ್ಧ ಸಿಖ್ ಯುಎಸ್ ಸೇನಾ ಅಧಿಕಾರಿಯ ಹೋರಾಟದ ಕುರಿತಾದ ಭಾರತೀಯ-ಅಮೆರಿಕನ್ ಕಿರುಚಿತ್ರ 'ಕರ್ನಲ್ ಕಲ್ಸಿ' ಜೂನ್ 20ರಂದು ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (MIFF 2024) ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ.

ಈ ಚಿತ್ರವು ಯುಎಸ್‌ ಸಿಖ್ ಸೇನಾ ಅಧಿಕಾರಿ ಕಮಲಜೀತ್ ಕಲ್ಸಿಯ ಕಥೆಯನ್ನು ಒಳಗೊಂಡಿದೆ. ಇವರ ತಂದೆ ಭಾರತೀಯ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸಿದರೆ, ಅಜ್ಜ ಬ್ರಿಟಿಷ್ ಸೈನ್ಯದಲ್ಲಿದ್ದರು. ಕಲ್ಸಿ ಕುಟುಂಬ ಭಾರತದಲ್ಲಿ ನೆಲೆಸಿದ್ದರಿಂದ ಅವರು ಇಲ್ಲಿನ ಸಂಪ್ರದಾಯವನ್ನು ಮುಂದುವರಿಸಲು ನಿರ್ಧರಿಸಿದ್ದರು.

ಯುಎಸ್‌ ಸೈನ್ಯಕ್ಕೆ ಸೇರಿದ್ದ ಇವರಿಗೆ ತರಬೇತಿಯ ವೇಳೆ ಧಾರ್ಮಿಕ ಗುರುತು ಸಮಸ್ಯೆಯಾಗಿರಲಿಲ್ಲ. ಆದರೆ ಅಫ್ಘಾನಿಸ್ತಾನಕ್ಕೆ ನಿಯೋಜಿಸುವ ಸಮಯ ಬಂದಾಗ, ಅವರ ಪೇಟ ಹಾಗೂ ಗಡ್ಡವನ್ನು ತೆಗೆಯುವಂತೆ ಸೂಚಿಸಲಾಯಿತು.

ಆದರೆ ಸಿಖ್ ಧರ್ಮದಲ್ಲಿ, ಪೇಟ ಮತ್ತು ಗಡ್ಡ ಧಾರ್ಮಿಕ ಗುರುತಿನ ಭಾಗವಾಗಿದೆ. ಹಾಗಾಗಿ ಕಲ್ಸಿ ತನ್ನ ಸಾಂವಿಧಾನಿಕ ಹಕ್ಕಿಗಾಗಿ ಯುಎಸ್‌ ಸೈನ್ಯದ ವಿರುದ್ಧ ಮೊಕದ್ದಮೆ ಹೂಡಿದ್ದರು. ಇದು ಚಿತ್ರದ ಕಥಾವಸ್ತು.

40 ನಿಮಿಷಗಳ ಈ ಚಿತ್ರವನ್ನು ನಿರ್ದೇಶಕರಾದ ಆನಂದ್ ಕಮಲಾಕರ್ ಮತ್ತು ಗೀತಾ ಗಂಧಭಿರ್ ನಿರ್ಮಿಸಿದ್ದಾರೆ. ಕರ್ನಲ್ ಕಲ್ಸಿ ಚಿತ್ರ ಈ ಹಿಂದೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿತ್ತು.

ಜೂನ್ 15ರಿಂದ ಪ್ರಾರಂಭವಾದ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೂನ್ 21 ರಂದು ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT