ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ ಶ್ರೀನಾಥ್ ನಟನೆಯ ‘ಜೆರ್ಸಿ’ ಸಿನಿಮಾ ಟೊರೊಂಟೊ ಸಿನಿಮೋತ್ಸವಕ್ಕೆ ಆಯ್ಕೆ

Last Updated 1 ಆಗಸ್ಟ್ 2020, 8:11 IST
ಅಕ್ಷರ ಗಾತ್ರ

ನಾನಿ ಮತ್ತು ಶ್ರದ್ಧಾ ಶ್ರೀನಾಥ್‌ ನಟನೆಯ ತೆಲುಗಿನ ‘ಜೆರ್ಸಿ’ ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಇದರಲ್ಲಿ ನಾನಿ ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗೌತಮ್‌ ತಿನ್ನನೂರಿ ನಿರ್ದೇಶನದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ನಡಿ ನಿರ್ಮಾಣವಾದ ಈ ಚಿತ್ರ ಈಗ ಟೊರೊಂಟೊ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ(ಐಐಎಫ್‌ಎಫ್‌ಟಿ– ಇಂಟರ್‌ನ್ಯಾಷನಲ್‌ ಇಂಡಿಯನ್ ಫಿಲ್ಮ್‌ ಫೆಸ್ಟಿವಲ್‌ ಇನ್ ಟೊರೊಂಟೊ) ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಆಗಸ್ಟ್‌ 9ರಿಂದ 15ರವರೆಗೆ ಈ ಸಿನಿಮೋತ್ಸವ ನಡೆಯಲಿದೆ. ಆಗಸ್ಟ್‌ 11ರಂದು ಸಂಜೆ 7.30ಕ್ಕೆ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಈ ಬಗ್ಗೆ ಐಐಎಫ್‌ಎಫ್‌ಟಿ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಜೆರ್ಸಿ ಚಿತ್ರತಂಡ ಸಿನಿಮೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಆದರೆ, ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಂದಹಾಗೆ ಈ ಸಿನಿಮಾ ಹಿಂದಿಯಲ್ಲೂ ರಿಮೇಕ್‌ ಆಗುತ್ತಿದ್ದು, ಶಾಹಿದ್‌ ಕಪೂರ್‌ ಮತ್ತು ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಟೊರೊಂಟೊ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನಕ್ಕೆ ‘ಜೆರ್ಸಿ’ ಸಿನಿಮಾ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ’ ಎಂದು ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ ಟ್ವೀಟ್‌ ಮಾಡಿದೆ.

‘ಜೆರ್ಸಿ’ ಸಿನಿಮಾದ ಜೊತೆಗೆ ತಮಿಳಿನ ‘ಕೈಥಿ’ ಮತ್ತು ಮಲಯಾಳದ ‘ಟ್ರಾನ್ಸ್‌’ ಸಿನಿಮಾಗಳೂ ಪ್ರದರ್ಶನಕ್ಕೆ ಆಯ್ಕೆಯಾಗಿವೆ. ‘ಕೈಥಿ’ಯಲ್ಲಿ ಕಾರ್ತಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಫಹಾದ್ ಫಾಸಿಲ್ ಮತ್ತು ನಜ್ರಿಯಾ ‘ಟ್ರಾನ್ಸ್‌’ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT