ನಟಿ ಶ್ರೀಯಾ ಶರಣ್ ನಟನೆಯ ಮುಂದಿನ ‘ಗಮನಂ’ ಸಿನಿಮಾದ ಕುರಿತು ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ಮೊನ್ನೆ ಶ್ರೀಯಾ ಹುಟ್ಟುಹಬ್ಬದ ದಿನದಂದು ಸಿನಿಮಾದ ಫಸ್ಟ್‌ಲುಕ್ ಬಿಡುಗಡೆ ಮಾಡಿತ್ತು ಚಿತ್ರತಂಡ. ಸದಾ ಗ್ಲಾಮರ್ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಶ್ರೀಯಾ ಪೋಸ್ಟರ್‌ನಲ್ಲಿ ಸಾಧಾರಣ ಸೀರೆ ಧರಿಸಿದ್ದ ಹೆಂಗಸಿನ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಈಗ ಸಿನಿಮಾದಲ್ಲಿ ಶ್ರೀಯಾದ್ದು ಮಾತು ಬಾರದ ಹಳ್ಳಿ ಹೆಂಗಸಿನ ಪಾತ್ರ ಎಂಬ ಸುದ್ದಿ ಚಿತ್ರತಂಡದಿಂದ ಹೊರ ಬಿದ್ದಿದೆ.