ಮಂಗಳವಾರ, ನವೆಂಬರ್ 24, 2020
21 °C

8 ವರ್ಷಗಳ ಬಳಿಕ ಟಾಲಿವುಡ್‌ನಲ್ಲಿ ನಟಿಸುತ್ತಿರುವ ಸಿದ್ಧಾರ್ಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬೊಮ್ಮರಿಲ್ಲು’ ಖ್ಯಾತಿಯ ನಟ ಸಿದ್ಧಾರ್ಥ್ 8 ವರ್ಷಗಳ ಬಳಿಕ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅಜಯ್‌ ಭೂಪತಿ ನಿರ್ದೇಶನದ, ಶರವಾನಂದ್ ನಟನೆಯ ‘ಮಹಾ ಸಮುದ್ರಂ’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಸಿದ್ಧಾರ್ಥ್‌.

ಇಷ್ಟು ದಿನಗಳ ಕಾಲ ಹಿಂದಿ, ತಮಿಳು, ಮಲೆಯಾಳಂ ಚಿತ್ರಗಳಲ್ಲಿ ನಟಿಸುತ್ತಾ, ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದ ಸಿದ್ಧಾರ್ಥ್ ಮರಳಿ ತೆಲುಗಿನಲ್ಲಿ ನಟಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ತಿಂಗಳಲ್ಲಿ ಶೂಟಿಂಗ್ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ ಈ ಚಾಕೊಲೇಟ್ ಬಾಯ್‌.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿದ್ಧಾರ್ಥ್ ‘8 ವರ್ಷಗಳ ನಂತರ ‘ಮಹಾಸಮುದ್ರಂ’ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ. ನಾನು ಮರಳಿ ಬರುತ್ತಿದ್ದೇನೆ. ಒಂದು ಒಳ್ಳೆಯ ತಂಡ ಹಾಗೂ ಸಹ ನಟರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ. ಸಿನಿಮಾ ಕಥೆ ತುಂಬಾ ಚೆನ್ನಾಗಿದೆ. ನನಗೆ ನಿಮ್ಮ ಹಾರೈಕೆ ಬೇಕು’ ಎಂದಿದ್ದಾರೆ. ಅಲ್ಲದೇ ಶರವಾನಂದ್‌, ಆದಿತಿ ರಾವ್‌ ಹೈದರಿ, ಅಜಯ್ ಭೂಪತಿ ಮುಂತಾದವರನ್ನು ಪೋಸ್ಟ್‌ನೊಂದಿಗೆ ಟ್ಯಾಗ್ ಮಾಡಿದ್ದಾರೆ.

ಪ್ರೇಮಕಥೆ ಹಾಗೂ ಆ್ಯಕ್ಷನ್ ಹಿನ್ನೆಲೆಯುಳ್ಳ ಮಹಾ ಸಮುದ್ರಂ ಸಿನಿಮಾದಲ್ಲಿ ಅದಿತಿ ರಾವ್ ಹೈದರಿ ಹಾಗೂ ಅನು ಇಮ್ಯಾನುವಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು