‘ಮಿ. ಲೋಕಲ್’ ಕೌಟುಂಬಿಕ ಚಿತ್ರ

ಭಾನುವಾರ, ಜೂನ್ 16, 2019
28 °C

‘ಮಿ. ಲೋಕಲ್’ ಕೌಟುಂಬಿಕ ಚಿತ್ರ

Published:
Updated:
Prajavani

ನಟ ಶಿವ ಕಾರ್ತಿಕೇಯನ್ ತಮ್ಮ ಮುಂಬರುವ ಚಿತ್ರ ‘ಮಿ. ಲೋಕಲ್‌’ನಲ್ಲಿ ಬಾರ್ ಸಾಂಗ್ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ದೃಶ್ಯಗಳಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಹಿಂದಿನ ಸಿನಿಮಾ ‘ರೆಮೊ’ದಲ್ಲಿ ಇಂಥ ಆಕ್ಷೇಪಾರ್ಹ ದೃಶ್ಯಗಳ ಕಾರಣಕ್ಕಾಗಿ ಶಿವ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ತೀವ್ರ ಟೀಕೆಗೊಳಗಾಗಿದ್ದರು. 

‘ಮಿ.ಲೋಕಲ್’ಸಿನಿಮಾದ ನಿರ್ದೇಶಕ ರಾಜೇಶ್ ಎಂ. ಈಚೆಗೆ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ಕರೆದು, ‘ಶಿವ ಅವರ ಸೂಚನೆಯ ಮೇರೆಗೆ ನನ್ನ ಸಿನಿಮಾದಲ್ಲಿ ಬಾರ್ ಸಾಂಗ್ ಮತ್ತು ಮಹಿಳಾ ದೌರ್ಜನ್ಯದ ದೃಶ್ಯಗಳಿಲ್ಲ. ಸಾಮಾನ್ಯವಾಗಿ ನನ್ನ ಸಿನಿಮಾದಲ್ಲಿ ಒಂದಾದರೂ ಇಂಥ ದೃಶ್ಯಗಳಿರುತ್ತವೆ. ಆದರೆ, ಶಿವ ಅವರ ಕೋರಿಕೆಯ ಮೇರೆಗೆ ಇಂಥ ದೃಶ್ಯಗಳಿಗೆ ನನ್ನ ಸಿನಿಮಾದಲ್ಲಿ ಕಡಿವಾಣ ಹಾಕಿದ್ದೇನೆ’ ಎಂದವರು ಹೇಳಿದ್ದಾರೆ. 

‘ಮಿ. ಲೋಕಲ್’ ಶುಕ್ರವಾರ ತೆರೆ ಕಾಣಲಿದ್ದು, ಶಿವ ಅವರಿಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ರಾಧಿಕಾ ಶರತ್ ಕುಮಾರ್, ಯೋಗಿಬಾಬು, ಸತೀಶ್, ರೊಬೊ ಶಂಕರ್ ಮತ್ತಿತರರು ಈ ಸಿನಿಮಾದಲ್ಲಿದ್ದಾರೆ. ನಯನ–ಶಿವ ಈ ಹಿಂದೆ ‘ವೇಲೈಕ್ಕರನ್’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. 

 ವೇಲೈಕ್ಕರನ್ ಸಿನಿಮಾದಲ್ಲಿ ನಯನ ಅವರ ಪ್ರತಿಭೆಗೆ ತಕ್ಕಂತೆ ನಟನೆಗೆ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ಈ ಬಗ್ಗೆ ನನಗೂ ಬೇಸರವಿತ್ತು. ಆದರೆ, ‘ಮಿ. ಲೋಕಲ್‌’ನಲ್ಲಿ ಆ ಕೊರತೆಯನ್ನು ನಯನ ನೀಗಿಸಿದ್ದಾರೆ.  ಇದು ಅಪ್ಪಟ ಮನರಂಜನೆಯ ಸಿನಿಮಾ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ’ ಎಂದು ಶಿವ ಹೇಳಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !