ಶಿವ–ನಯನತಾರಾ ಈಗ ‘ಲೋಕಲ್‌’ ಜೋಡಿ

7

ಶಿವ–ನಯನತಾರಾ ಈಗ ‘ಲೋಕಲ್‌’ ಜೋಡಿ

Published:
Updated:
Prajavani

‘ವೇಲೈಕಾರನ್‌’ ಚಿತ್ರದಲ್ಲಿ ಮಿಂಚಿದ್ದ ಶಿವಕಾರ್ತಿಕೇಯನ್‌–ನಯನತಾರಾ ಈ ಬಾರಿ ‘ಮಿ.ಲೋಕಲ್‌’ನಲ್ಲಿ ಕೌಟುಂಬಿಕ ಮನರಂಜನೆಯ ಕತೆಗೆ ಜೀವ ತುಂಬಲಿದ್ದಾರೆ. ನಯನತಾರಾ ಜೊತೆಗೆ ಮತ್ತೆ ತೆರೆ ಹಂಚಿಕೊಳ್ಳುವ ಖುಷಿಯನ್ನು ಶಿವಕಾರ್ತಿಕೇಯನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಸೂಟು ಬೂಟು, ಕಪ್ಪು ಕನ್ನಡಕಧಾರಿಯಾಗಿ, ಕೈಯಲ್ಲಿ ಗಾಜಿನ ಲೋಟಾದಲ್ಲಿ ಚಹಾ ಹಿಡಿದು ಸೋಫಾದಲ್ಲಿ ಕುಳಿತಿರುವ ಫೋಟೊವನ್ನು ಶಿವಕಾರ್ತಿಕೇಯನ್ ಪೋಸ್ಟ್‌ ಮಾಡಿದ್ದಾರೆ. ಇದು, ‘ಮಿ.ಲೋಕಲ್‌’ ಚಿತ್ರದ ಫಸ್ಟ್‌ ಲುಕ್‌ ಕೂಡಾ ಹೌದು. 

ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿಯನಿಸಿದ್ದ ‘ಮನ್ನನ್‌’ ಚಿತ್ರವನ್ನೇ ಆಧರಿಸಿ ‘ಮಿ.ಲೋಕಲ್‌’ ಚಿತ್ರಕತೆ ಬರೆಯಲಾಗಿದೆ. ವೇಲೈಕಾರನ್‌ ಕೂಡಾ ರಜನಿ ಅಭಿನಯದ ‘ಒರು ಕಾಲ್‌ ಒರು ಕನ್ನಡಿ’ ಚಿತ್ರದ ಛಾಯೆಯಾಗಿಯೆ ಮೂಡಿಬಂದಿತ್ತು. ರಾಧಿಕಾ ಶರತ್‌ಕುಮಾರ್‌, ಸತೀಶ್‌ ಮತ್ತು ಯೋಗಿ ಬಾಬು ಅವರು ‘ಮಿ.ಲೋಕಲ್‌’ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಹಿಪ್‌ ಹಾಪ್‌ ತಮೀಜಾ ಸಂಗೀತ ಸಂಯೋಜಿಸಲಿದ್ದಾರೆ. 

‘ಸೀಮರಾಜಾ’ದಲ್ಲಿ ನಟಿಸಿದ ನಂತರ ಶಿವಕಾರ್ತಿಕೇಯನ್‌ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ನಯನತಾರಾ, ‘ವಿಶ್ವಂ’ ನಂತರ ನಟಿಸಿದ ‘ಆಯಿರಾ’ ಮತ್ತು ‘ಕೊಳೈಯುತ್ತಿರ್‌ ಕಾಲಂ’ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !