ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಂ ಕಪೂರ್ ಗರ್ಭಿಣಿಯಂತೆ; ಇದು ನಿಜವೇ?

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದದ್ದು ಕೇವಲ ವದಂತಿ
Last Updated 14 ಅಕ್ಟೋಬರ್ 2018, 6:18 IST
ಅಕ್ಷರ ಗಾತ್ರ

‘ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8ರಂದು ವಿವಾಹವಾಗಿದ್ದ ಸೋನಂ ಕಪೂರ್ ಈಗ ಗರ್ಭಿಣಿ!’.

ಇಂತಹದೊಂದು ವದಂತಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿರುವ ಅವರ ಫೋಟೊ ಪುಷ್ಟಿ ನೀಡಿದೆ.

ಪಿಂಕ್ ಬಣ್ಣದ ದೊಗಲೆ ಉಡುಪಿನಲ್ಲಿ ಸೋನಂ ಈಚೆಗೆ ಮುಂಬೈನಲ್ಲಿಕಾಣಿಸಿಕೊಂಡಿದ್ದರು. ಆ ಉಡುಪಿನಲ್ಲಿ ಅವರು ಕೊಂಚ ದುಂಡು ದುಂಡಗೆ ಕಾಣಿಸುತ್ತಿದ್ದರಲ್ಲದೇ, ಅವರ ಹೊಟ್ಟೆ ಕೊಂಚ ಉಬ್ಬಿಕೊಂಡಂತೆ ಕಾಣುತ್ತಿತ್ತು. ಹೋಟೆಲಿನಿಂದ ಹೊರಗೆ ಬರುತ್ತಿರುವ ಸೋನಂ ಅವರ ಈ ಫೋಟೊ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿದೆ.

ಸೋನಂ ಅಭಿಮಾನಿಗಳು ‘ಸೋನಂ ಗರ್ಭಿಣಿಯಾಗಿದ್ದಾರೆ, ಅದಕ್ಕಾಗಿ ಅವರು ಅಂತಹ ಉಡುಪು ಧರಿಸಿದ್ದಾರೆ’ ಎಂದು ಕಮೆಂಟ್ ಮಾಡಿದ್ದಾರೆ.

‘ವೀರೆ ಡಿ ವೆಡ್ಡಿಂಗ್ ನಟಿ ತನ್ನ ಹೊಟ್ಟೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು‘ಸೋನಂಗೆ ಏನಾಗಿದೆ. ಆಕೆ ಗರ್ಭಿಣಿಯೇ?’ ಎಂದಿದ್ದಾರೆ. ಕೆಲವರು ‘ಬಟ್ಟೆ ಆಯ್ಕೆ ವಿಚಾರದಲ್ಲಿ ಸೋನಂ ದಡ್ಡಿ. ಹುಚ್ಚಾಸ್ಪತ್ರೆಯಿಂದ ಹೊರಬಂದಂತೆ ಕಾಣುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಈ ಪ್ರತಿಕ್ರಿಯೆಗಳ ಬಗ್ಗೆ ಸೋನಂಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರ ಆಪ್ತವಲಯದ ಮೂಲಗಳು, ‘ಸೋನಂ ಗರ್ಭಿಣಿ ಎಂಬುದು ಕೇವಲ ಗಾಳಿಸುದ್ದಿಗಳಷ್ಟೇ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT