ರಂಗಕರ್ಮಿ ಮೌನೇಶ್ ಬಡಿಗೇರ್ ನಿರ್ದೇಶನ, ಬಹುಭಾಷಾ ನಟಿ ಹರಿಪ್ರಿಯ ಹಾಗೂ ಯಶವಂತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸೂಜಿದಾರ'ದ ಟೀಸರ್ಅನ್ನು ಭಾನುವಾರ ಯುಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿದೆ.

ಬೆಳಿಗ್ಗೆ 10:30ಕ್ಕೆ ಟೀಸರ್ಬಿಡುಗಡೆಯಾದ ಹತ್ತು ನಿಮಿಷಗಳಲ್ಲಿ ಎರಡು ಸಾವಿರ ಜನರು ಇದನ್ನು ವೀಕ್ಷಣೆ ಮಾದ್ದರು. ಸಂಜೆ ಆರು ಗಂಟೆಗೆ 35 ಸಾವಿರಕ್ಕೂ ಹೆಚ್ಚು ಜನರು ಟ್ರೇಲರ್ ವೀಕ್ಷಣೆ ಮಾಡಿದ್ದಾರೆ.

’ಯಾರು ಯಾರಿಗೋಸ್ಕರ ಬದುಕಲ್ಲ ರೀ ನಾವು ನಮಗೋಸ್ಕರ ಬದುಕಬೇಕು....ಹರಿದೋಗಿರುವ ಈ ಹೃದಯಕ್ಕೆ ನಿಮ್ಮ ಕೈಯಾರೆ ಎರಡು ಸ್ಟಿಚ್ ಹಾಕ್ರಿ ಪುಣ್ಯ ಬರುತ್ತೆ.....ನೀವು ಹಿಂಗ್ ಮಾಡಿದ್ರಿ ಅಂಥ ನನಗೇನು ಬೇಜಾರಿಲ್ಲ... ಬನ್ನಿ .....’ ಹೀಗೆ ನಾಯಕಿ ಮತ್ತು ನಾಯಕನ ನಡುವೆ ನಡೆಯುವ ಸಂಭಾಷಣೆಗಳಿಂದ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತದೆ.

ನಟಿ ಹರಿಪ್ರಿಯ ಮತ್ತು ನಟ ಯಶವಂತ್ ಶೆಟ್ಟಿ ಅವರ ನಟನೆ ಪ್ರೇಕ್ಷಕರಿಗೆ ತುಂಬಾ ಹಿಡಿಸುವಂತಿದೆ. ಮೇಲ್ನೋಟಕ್ಕೆ ಇದು ನಾಯಕಿ ಪ್ರಧಾನವಾದ ಸಿನಿಮಾ ಇರಬಹುದೆಂಬ ಕುತೂಹಲ ಸೃಷ್ಟಿಸಿದೆ. ಮೇ 10ರಂದು ಈ ಸಿನಿಮಾ ತೆರೆಗೆ ಬರಲಿದೆ.

ಶ್ರೀಧರ ಹೆಗ್ಗೋಡು ಮತ್ತು ದಿಗ್ವಿಜಯ್ ಹೆಗ್ಗೋಡು (ಭಿನ್ನಷಡ್ಜ) ಅವರು ಸಂಗೀತ ಸಂಯೋಜನೆ ನೀಡಿರುವ ಈ ಚಿತ್ರದ ಐದು ಹಾಡುಗಳ ಧ್ವನಿ ಸುರುಳಿ ಈಗಾಗಲೇ ಬಿಡುಗಡೆಯಾಗಿದ್ದು, ಕೇಳುಗರ ಮನಗೆದ್ದಿವೆ.

ಈ ಸಿನಿಮಾಕ್ಕೆ ಆರ್ಥಿಕ ಇಂಧನವನ್ನು ಸಚ್ಚೀಂದ್ರನಾಥ ನಾಯಕ್ ಮತ್ತು ಅಭಿಷೇಕ್ ಕೋಟೆಗಾರ್ ಒದಗಿಸಿದ್ದಾರೆ.

ಸುಚೇಂದ್ರ ಪ್ರಸಾದ್, ಅಚ್ಯುತಕುಮಾರ್, ಚೈತ್ರಾ ಕೊಟೂರು, ಬಿರಾದಾರ್, ಶ್ರೇಯಾ ಅಂಚನ್ ಅವರು ತಾರಾಗಣದಲ್ಲಿದ್ದಾರೆ. ಮೋಹನ್ ಅವರ ಸಂಕಲನ, ಅಶೋಕ್ ರಾಮನ್ ಅವರ ಛಾಯಾಗ್ರಣ, ಎಸ್.ಪ್ರದೀಪ್ ಕುಮಾರ್ ಅವರ ಹಿನ್ನಲೆ ಸಂಗೀತ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.