ಬುಧವಾರ, ಆಗಸ್ಟ್ 21, 2019
22 °C

SORRY ಕಾವೇರಿ ಮತ್ತು ಹ್ಯಾಂಡಿಕ್ಯಾಮ್‌

Published:
Updated:
Prajavani

ಪುಟಾಣಿ ಛಾಯಾಗ್ರಾಹಕಿಯ ಸುತ್ತ ಹೆಣೆದಿರುವ ಕಥೆಯೊಂದು ಸಿನಿಮಾ ರೂಪ ತಾಳುತ್ತಿದೆ. ಈ ಚಿತ್ರಕ್ಕೆ ‘SORRY ಕಾವೇರಿ’ ಎಂದು ಹೆಸರಿಡಲಾಗಿದೆ.

‘ಸತ್ಯ ಮತ್ತು ವೀಣಾ ದಂಪತಿಯ ಪುತ್ರಿ ಕಾವೇರಿ. ಸತ್ಯನ ವೃತ್ತಿ ಸಿನಿಮಾ ಛಾಯಾಗ್ರಹಣ. ಈತ ತನ್ನ ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಹ್ಯಾಂಡಿಕ್ಯಾಮ್ ಕೊಡಿಸಿರುತ್ತಾನೆ. ಕಾವೇರಿ ಆ ಕ್ಯಾಮೆರಾ ಜೊತೆ ನಂಟು ಬೆಳೆಸಿಕೊಳ್ಳುತ್ತಾಳೆ. ತಾನು ಕೂಡ ತಂದೆಯಂತೆಯೇ ಛಾಯಾಗ್ರಹಣದಲ್ಲಿ ತೊಡಗಿಕೊಳ್ಳುವುದಾಗಿ ಹೇಳುತ್ತಿರುತ್ತಾಳೆ. ಮುಂದೊಂದು ದಿನ ಅವಳ ಬದುಕಿನಲ್ಲಿ ಬರುವ ಒಂದು ಕೆಟ್ಟ ಅಧ್ಯಾಯಕ್ಕೂ ಆ ಕ್ಯಾಮೆರಾ ಸಾಕ್ಷಿಯಾಗುತ್ತದೆ.’ ಇದು ಈ ಚಿತ್ರದ ಕಥಾಹಂದರ ಎಂದು ಸಿನಿತಂಡ ಹೇಳಿದೆ.

ಬಾಲನಟಿ ಪ್ರಾಣ್ಯಾ ರಾವ್ ಕಾವೇರಿ ಪಾತ್ರದಲ್ಲಿ ನಟಿಸಿದ್ದಾಳೆ. ಈಕೆ ಕನ್ನಡ-ತೆಲಗು ಚಿತ್ರಗಳಲ್ಲಿ ಈಗಾಗಲೇ ನಟಿಸಿ, ಅನುಭವ ಪಡೆದುಕೊಂಡಿರುವ ನಟಿ. ಅರವಿಂದ ರಾವ್ ಅವರು ಸತ್ಯ ಪಾತ್ರದಲ್ಲಿ, ರೂಪಾ ಅವರು ವೀಣಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿರುವವರು ಅಮಿತ್ ದೇಸಾಯಿ ಮತ್ತು ಹರಿ ಪರಾಕ್. ವಿ. ಮನೋಹರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಗೇಶ್ ಕೆ.ದೇವ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದ ಎರಡು ಹಂತಗಳ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ.

Post Comments (+)