ಹಾಲಿವುಡ್ ಸ್ಟಾರ್ ಟಾಮ್ ಹಾಲೆಂಡ್ ಅವರು ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದು ಆಗ್ರಾದಲ್ಲಿರುವ ತಾಜ್ಮಹಲ್ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಟಾಮ್ ಹಾಲೆಂಡ್ ನಟಿಸಿರುವ 'ಅನ್ಚಾರ್ಟೆಡ್' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಸುದ್ದಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಸಿನಿಮಾ ಭಾರತದಲ್ಲೂ ಬಿಡುಗಡೆಯಾಗಲಿದೆ.

‘ನಾನು ಭಾರತದ ದೊಡ್ಡ ಅಭಿಮಾನಿಯಾಗಿರುವೆ. ಅಲ್ಲಿಗೆ ಹೋಗಲು ನನಗೆ ಇಲ್ಲಿಯವರೆಗೂ ಅವಕಾಶ ದೊರೆತಿಲ್ಲ. ಮುಂದೆ ಒಂದು ದಿನ ಅಲ್ಲಿಶೂಟಿಂಗ್ ಕೂಡ ಮಾಡುತ್ತೇನೆ, ಹಾಗೇ ಆಗ್ರಾದಲ್ಲಿರುವ ತಾಜ್ಮಹಲ್ ನೋಡುತ್ತೇನೆ’ಎಂದು ಹಾಲೆಂಡ್ ಹೇಳಿದ್ದಾರೆ.

‘ನನ್ನ ಮೇಲಿನ ಪ್ರೀತಿ, ಅಭಿಮಾನ ಹಾಗೂ ನನ್ನ ಚಿತ್ರಗಳನ್ನು ಬೆಂಬಲಿಸುತ್ತಿರುವ ಭಾರತದಲ್ಲಿನ ನನ್ನ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದಿದ್ದಾರೆ

'ಅನ್ಚಾರ್ಟೆಡ್' ಸಿನಿಮಾ ಯುರೋಪ್ನ ಕೆಲದೇಶಗಳು ಸೇರಿದಂತೆ ಅಮೆರಿಕದಲ್ಲಿ ಫೆಬ್ರುವರಿ 18ರಂದು ಬಿಡುಗಡೆಯಾಗಲಿದೆ.

ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಹಾಲೆಂಡ್ ಅಭಿನಯದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರ ಭಾರತದಲ್ಲಿ ಹಿಟ್ ಆಗಿತ್ತು. ಭಾರತೀಯ ಪ್ರೇಕ್ಷಕರು ಹಾಲೆಂಡ್ ಅವರ ಈ ಸಿನಿಮಾವನ್ನು ಮೆಚ್ಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.