ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೆಟರನ್’ ಆಗಲಿದ್ದಾರೆ ಶ್ರೀನಿ

Last Updated 30 ನವೆಂಬರ್ 2020, 8:02 IST
ಅಕ್ಷರ ಗಾತ್ರ

ನಿರ್ದೇಶಕ ಶ್ರೀನಿ ಅವರು ತಮ್ಮ ಓಲ್ಡ್‌ ಮಾಂಕ್‌ ಶೂಟಿಂಗ್‌ ನಡುವೆ ‘ವೆಟರನ್’‌ ಹೆಸರಿನ ಕಿರುಚಿತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಮೂರು ನಾಲ್ಕು ದಿನಗಳ ಒಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ.

ಇದುಕುತೂಹಲಕಾರಿ ವಿಷಯವನ್ನೊಳಗೊಂಡ ವೈಜ್ಞಾನಿಕ ಕಥೆಯನ್ನು ಹೊಂದಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾ ಹಂದರದ ಜೊತೆಗೆ ಮರಗಳು, ಆಮ್ಲಜನಕ ಇಲ್ಲದೇ ಮನುಷ್ಯನ ಅಸ್ತಿತ್ವದ ಬಗ್ಗೆ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ.

‘ಇದು ಯುವ ವಿಜ್ಞಾನಿಯೊಬ್ಬನ ಕಥೆ. ಆತ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ. ಆದರೆ, ಮನುಷ್ಯನ ದುರಾಸೆಯ ಕಾರಣಕ್ಕೆ ಆತ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಗಿಬರುತ್ತದೆ ಎಂಬುದು ಚಿತ್ರದ ತಿರುಳು’ ಎಂದು ಹೇಳಿದರು ಶ್ರೀನಿ.

ಕೋವಿಡ್‌ ಅವಧಿಯಲ್ಲಿ ಶ್ರೀನಿ ಅವರು ಸಿನಿಮಾ ಕಾರ್ಯಾಗಾರಗಳನ್ನು ನಡೆಸುತ್ತಿದ್ದರು. ಅಲ್ಲಿಗೆ ಬಂದ ಆಸಕ್ತರ ತಂಡವೊಂದು ಈ ಕಥೆಯನ್ನು ಅವರಿಗೆ ಕೊಟ್ಟಿದೆ. ಯುವಕರ ತಂಡದಲ್ಲಿದ್ದ ಶ್ರದ್ಧೆ ಮತ್ತು ಪರಿಕಲ್ಪನೆಯ ಸ್ಪಷ್ಟತೆ ಗಮನಿಸಿದ ಶ್ರೀನಿ ಅವರು ಈ ಚಿತ್ರ ನಿರ್ಮಿಸಲು ಒಪ್ಪಿಕೊಂಡರಂತೆ. ಒಟ್ಟಾರೆ ಚಿತ್ರ 30ನಿಮಿಷಗಳ ಅವಧಿಯದ್ದು.

ಶ್ರೀನಿ ಜತೆ ರಂಜಿನಿ ರಾಘವನ್‌ ನಟಿಸಿದ್ದಾರೆ. ಶಿವು ಅವರ ನಿರ್ದೇಶನವಿದೆ. ಚಿತ್ರವನ್ನು ಅಂತರರಾಷ್ಟ್ರೀಯ ಚಿತ್ರೋತ್ಸದಲ್ಲಿಪ್ರದರ್ಶಿಸಲು ನಿರ್ಧರಿಸಿದ್ದೇವೆ ಎಂದು ಶ್ರೀನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT