ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾನಾಯ ಕಪೂರ್ ಫೋಟೊಗೆ ಹಾಟ್ ಎಂದು ಕಾಮೆಂಟ್ ಮಾಡಿದ ಶಾರುಖ್ ಪುತ್ರಿ

Last Updated 22 ಮಾರ್ಚ್ 2022, 4:53 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ.

ಮಾಡೆಲಿಂಗ್, ನಟನಾ ತರಬೇತಿ ಎಂದೆಲ್ಲ ಹಲವು ರೀತಿಯಲ್ಲಿ ತೊಡಗಿಸಿಕೊಂಡಿರುವ ಸುಹಾನಾ, ಗೆಳತಿಯರ ಜತೆ ಪಾರ್ಟಿ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ.

ಸುಹಾನಾ ಖಾನ್ ಅವರಿಗೆ ಶಾನಾಯ ಕಪೂರ್, ಅನನ್ಯಾ ಪಾಂಡೆ ಗೆಳತಿಯರಾಗಿದ್ದು, ವಾರಾಂತ್ಯದಲ್ಲಿ ಹಲವು ತಾಣಗಳಿಗೆ ಜತೆಯಾಗಿ ವಿಹಾರ ಹೋಗುತ್ತಾರೆ.

ಈ ಸಂದರ್ಭದಲ್ಲಿ ಶಾನಾಯ ಕಪೂರ್ ಅವರು ತೆಗೆದಿರುವ ಫೋಟೊ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಾನಾಯ ಫೋಟೊ ನೋಡಿರುವ ಸುಹಾನಾ ಖಾನ್, ‘ಹಾಟ್‘ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಮೂವರೂ ಗೆಳತಿಯರು ಪರಸ್ಪರ ಪಾರ್ಟಿ ಮಾಡುವ ಫೋಟೊಗಳನ್ನು ಸುಹಾನಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT