ಬುಧವಾರ, ಸೆಪ್ಟೆಂಬರ್ 22, 2021
21 °C

ನಿರ್ದೇಶಕ ಶಂಕರ್‌ ಪುತ್ರಿ ಅದಿತಿ ಈಗ ಕಾರ್ತಿಗೆ ನಾಯಕಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್‌ ಅವರ ಪುತ್ರಿ ಅದಿತಿಯನ್ನು ಸಿನಿಮಾರಂಗಕ್ಕೆ ಪರಿಚಯಿಸಲು ತಮಿಳಿನ ಸ್ಟಾರ್‌ ದಂಪತಿ ಸೂರ್ಯ–ಜ್ಯೋತಿಕಾ ಸಿದ್ಧತೆ ಮಾಡಿಕೊಂಡಿದ್ದಾರೆ.

ಹೌದು, ಅದಿತಿ ಶಂಕರ್‌ ಅವರನ್ನು ಸೂರ್ಯ ಮತ್ತು ಜ್ಯೋತಿಕಾ ಸಿನಿಮಾರಂಗಕ್ಕೆ ಪರಿಚಯಿಸುತ್ತಿದ್ದಾರೆ. ತಮ್ಮ 2ಡಿ ಸಿನಿಮಾ ಬ್ಯಾನರ್‌ ಅಡಿಯಲ್ಲಿ ’ವಿರುಮಾನ್‌’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ಈ ಚಿತ್ರಕ್ಕೆ ಅದಿತಿ ಶಂಕರ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಚೊಚ್ಚಲ ಸಿನಿಮಾದಲ್ಲಿ ಸ್ಟಾರ್‌ ನಟ ಕಾರ್ತಿಗೆ ನಾಯಕಿಯಾಗಿ ಅದಿತಿ ನಟಿಸುತ್ತಿರುವುದು ವಿಶೇಷ. 

1993ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಶಂಕರ್‌ ಇಂದಿಗೂ ಜನಪ್ರಿಯ ಸಿನಿಮಾಗಳ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಶಂಕರ್‌ ಕೆಲ ತಿಂಗಳ ಹಿಂದೆ ತಮ್ಮ ಮೊದಲ ಪುತ್ರಿಯ ವಿವಾಹವನ್ನು ಮಾಡಿದ್ದರು. ಇದೀಗ ಎರಡನೇ ಮಗಳನ್ನು ಸಿನಿಮಾ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. 

ಕಮಲ ಹಾಸನ್‌, ರಜನಿಕಾಂತ್, ವಿಕ್ರಮ್ ಅಂತಹ ಸ್ಟಾರ್ ನಟರಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ಶಂಕರ್‌ ಅವರ ನಿರ್ದೇಶನದ ಬಹುತೇಕ ಸಿನಿಮಾಗಳು ಬಾಕ್ಸ್‌ಆಫೀಸ್‌ ಹಿಟ್‌ ಆಗಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು