ಬುಧವಾರ, ಆಗಸ್ಟ್ 10, 2022
23 °C
ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿಗೂ ಡ್ರಗ್‌ ಜಾಲಕ್ಕೂ ನಂಟು ಆರೋಪ

ವಿಚಾರಣೆಗೆ ಹಾಜರಾಗಲು ಸೂಚಿಸಿ ರಿಯಾ ಚಕ್ರವರ್ತಿಗೆ ಸಮನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ ಸಾವಿನೊಂದಿಗೆ ತಳುಕು ಹಾಕಿಕೊಂಡಿರುವ ಡ್ರಗ್‌ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಗೆ ಮಾದಕವಸ್ತುಗಳ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಧಿಕಾರಿಗಳು ಭಾನುವಾರ ಸಮನ್ಸ್‌ ಜಾರಿ ಮಾಡಿದ್ದಾರೆ.

ಪಶ್ಚಿಮ ಮುಂಬೈನಲ್ಲಿರುವ ನಟಿ ಮನೆಗೆ ತೆರಳಿ ಸಮನ್ಸ್‌ ನೀಡಿರುವ ಎನ್‌ಸಿಬಿ ಜಂಟಿ ನಿರ್ದೇಶಕ ಸಮೀರ್‌ ವಾಂಖೆಡೆ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ರಿಯಾ ಚಕ್ರವರ್ತಿ ನಟ ಸುಶಾಂತ್‌ ಸಿಂಗ್‌ ಸಾವು ಪ್ರಕರಣದ ಮುಖ್ಯ ಆರೋಪಿ.

ಡ್ರಗ್‌ ಜಾಲ ಕುರಿತ ತನಿಖೆ ಚುರುಕುಗೊಳಿಸಿರುವ ಎನ್‌ಸಿಬಿ, ಈ ಪ್ರಕರಣದ ಇತರ ಆರೋಪಿಗಳಾದ ಶೋವಿಕ್‌, ಮಿರಾಂಡ ಹಾಗೂ ಸಾವಂತ್‌ ಅವರೊಂದಿಗೆ ರಿಯಾ ಅವರನ್ನು ಮುಖಾಮುಖಿಯಾಗಿಸಿ, ಈ ಜಾಲದಲ್ಲಿ ಅವರ ಪಾತ್ರ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸಲಿದೆ. 

ನಿಷೇಧಿತ ಮಾದಕ ವಸ್ತುಗಳ ಖರೀದಿ ಮತ್ತು ಮಾರಾಟದಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಇವರ ಮೊಬೈಲ್‌ ಸಂಭಾಷಣೆ, ಚಾಟ್‌ ವಿವರಗಳಿಂದ ತಿಳಿದು ಬರುತ್ತದೆ. ಈ ಆಯಾಮದ‌ಲ್ಲೂ ತನಿಖೆ ನಡೆಸಲಾಗುತ್ತದೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು