ಶನಿವಾರ, ಡಿಸೆಂಬರ್ 4, 2021
20 °C

ಎನ್‌ಸಿಬಿ ಮುಂದೆ 2ನೇ ದಿನ ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಅವರು ಸತತ ಎರಡನೇ ದಿನ ಸೋಮವಾರ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಮುಂದೆ ವಿಚಾರಣೆಗೆ ಹಾಜರಾದರು.

ಡ್ರಗ್ಸ್‌  ಜಾಲದೊಂದಿಗಿನ ಸಂಪರ್ಕ ಕುರಿತು  ಎನ್‌ಸಿಬಿ ಭಾನುವಾರ ರಿಯಾ ಅವರನ್ನು ಆರು ತಾಸು ವಿಚಾರಣೆಗೆ ಒಳಪಡಿಸಿತ್ತು.

ಸಂಸ್ಥೆಯ ಕಚೇರಿಗೆ ರಿಯಾ ಬೆಳಿಗ್ಗೆ ಸುಮಾರು 9.30ರ ಹೊತ್ತಿಗೆ ಬಂದರು. ಪೊಲೀಸರು ಅವರಿಗೆ ರಕ್ಷಣೆಗೆ ಒದಗಿಸಿದ್ದರು.  ರಿಯಾ ಅವರನ್ನು ಇ.ಡಿ. ಹಾಗೂ ಸಿಬಿಐ ಈಗಾಗಲೇ ವಿಚಾರಣೆ ನಡೆಸಿವೆ.

ರಿಯಾ ಅವರನ್ನು ಅವರ ಸೋದರ ಶೋವಿಕ್‌ ಅಲ್ಲದೆ ಇತರ ಆರೋಪಿಗಳಾದ ಸ್ಯಾಮುಯೆಲ್‌ ಮಿರಾಂಡಾ ಮತ್ತು ದೀಪೇಶ್‌ ಸಾವಂತ್‌ ಅವರ ಜತೆ ಮುಖಾಮುಖಿಯಾಗಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಡ್ರಗ್ಸ್‌ಗೆ ಸಂಬಂಧಿಸಿದಂತೆ ರಿಯಾ ಅವರು ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿದ ದಾಖಲೆ ಹೊರಬಿದ್ದ ಬಳಿಕ ಈ ವಿಚಾರಣೆ ನಡೆಯುತ್ತಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು