ಶನಿವಾರ, ಜನವರಿ 29, 2022
22 °C

ಫೆ.4ಕ್ಕೆ ತಾಪ್ಸಿ-ತಾಹಿರ್ ಅಭಿನಯದ 'ಲೂಪ್ ಲಪೆಟಾ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ಭಾಸಿನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಲೂಪ್ ಲಪೆಟಾ' ಸಿನಿಮಾ ಫೆಬ್ರುವರಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರು ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ತಾಪ್ಸಿ ಕೂಡ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಚಿತ್ರವನ್ನು ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆ ಮಾಡುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

'ಹೇ ಜೋಲರ್ (jholer) ತಾಹಿರ್ ರಾಜ್ ಭಾಸಿನ್, ಈ ಶಾರ್ಟ್‌ಕಟ್‌ಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ಯಾವಾಗ ನಿಲ್ಲಿಸುತ್ತೀರಾ? ಈ ಬಾರಿ ಅವರನ್ನು ರಕ್ಷಿಸಬಹುದೇ? ಲೂಪ್ ಲಪೆಟಾಗಾಗಿ ಸಿದ್ಧವಾಗಿರಿ, ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಮತ್ತು ಎಲಿಪ್ಸಿಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಅಡಿಯಲ್ಲಿ ಆಕಾಶ್ ಭಾಟಿಯಾ ನಿರ್ದೇಶನದ ಸಿನಿಮಾ ಫೆ. 4ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ' ಎಂದಿದ್ದಾರೆ.

ಆಕಾಶ್ ಭಾಟಿಯಾ ನಿರ್ದೇಶನದ ಲೂಪ್ ಲಪೆಟಾ ಸಿನಿಮಾ 1998ರ ಜರ್ಮನ್‌ನ ಹಿಟ್ ಚಿತ್ರ ಟಾಮ್ ಟೈವರ್ ನಿರ್ದೇಶನದ 'ರನ್ ಲೋಲಾ ರನ್‌'ನ ಬಾಲಿವುಡ್ ಅವತರಣಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು