ಭಾನುವಾರ, ಜನವರಿ 17, 2021
20 °C

ತಮಿಳಿನ ಖ್ಯಾತ ನಟ ಥವಾಸಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳಿನ ಖ್ಯಾತ ನಟ ಥವಾಸಿ ನಿನ್ನೆ ಸಂಜೆ ಮಧುರೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ‘ವರುಥಪದಥ ವಾಲಿಬಾರ್ ಸಂಗಂ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಈ ನಟ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನವೆಂಬರ್ 11ಕ್ಕೆ ಮಧುರೈನ ಶರವಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು.

ಟ್ವಿಟ್ಟರ್‌ ಮೂಲಕ ಈ ವಿಷಯ ತಿಳಿಸಿರುವ ಡಿಎಂಕೆ ಶಾಸಕ ಹಾಗೂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶರವಣನ್ ಈ ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಹಿಂದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಥವಾಸಿ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಯಾಚಿಸಿ ವಿಡಿಯೊ ಒಂದನ್ನು ಅಪ್‌ಲೋಡ್ ಮಾಡಿದ್ದರು. ಆ ವಿಡಿಯೊ ತುಂಬಾನೇ ವೈರಲ್ ಆಗಿತ್ತು. ಆಗ ಅನೇಕರು ಅವರಿಗೆ ಹಣ ಸಹಾಯ ಮಾಡಿದ್ದರು. ತಮಿಳು ನಟರಾದ ವಿಜಯ್ ಸೇತುಪತಿ, ಸಿವಕಾರ್ತಿಕೇಯನ್‌, ರಜನಿಕಾಂತ್‌, ಸಿಂಬು ಮೊದಲಾದವರು ಥವಾಸಿಗೆ ಆರ್ಥಿಕ ಸಹಾಯ ಮಾಡಿದ್ದರು. ಶಾಸಕ ಶರವಣನ್ ಅವರು ಥಾವಸಿ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಮುಂದಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು