ಬುಧವಾರ, ಆಗಸ್ಟ್ 4, 2021
26 °C

ಶಿವಣ್ಣನ ಜನ್ಮದಿನಕ್ಕೆ ‘ಭಜರಂಗಿ 2’ ಚಿತ್ರದ ಟೀಸರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಸಿರುವ ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಚಿತ್ರದ ಟೀಸರ್‌ ಇದೇ 12ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಶಿವರಾಜ್‌ಕುಮಾರ್‌ ಮತ್ತು ನಿರ್ದೇಶಕ ಹರ್ಷ ಎ. ಅವರ ಕಾಂಬಿನೇಷನ್‌ನಡಿ ಪ್ಯಾನ್‌ ಇಂಡಿಯಾ ಪರಿಕಲ್ಪನೆಯಲ್ಲಿ  ನಿರ್ಮಾಣವಾಗುತ್ತಿರುವ ‘ಭಜರಂಗಿ 2’ ಚಿತ್ರದ ಬಹುತೇಕ ಶೂಟಿಂಗ್‌ ಮತ್ತು ಎಡಿಟಿಂಗ್‌ ಕೊರೊನಾ ಪೂರ್ವದಲ್ಲೇ ಮುಗಿದಿತ್ತು. ಹತ್ತನ್ನೆರಡು ದಿನಗಳ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದೆ.

‌ಚಿತ್ರದ ಆರಂಭದಿಂದಲೂ ಹೆಚ್ಚಿನ ಮಾಹಿತಿ ಬಹಿರಂಗಪಡಿಸದೆ ಕುತೂಹಲ ಕಾಯ್ದುಕೊಂಡಿದ್ದ ಚಿತ್ರತಂಡ, ಒಂದೆರಡು ಪೋಸ್ಟರ್‌ಗಳನ್ನು ಮಾತ್ರ ಬಿಡುಗಡೆ ಮಾಡಿತ್ತು. ಜುಲೈ 12ರಂದು ಶಿವಣ್ಣನ‌ ಜನ್ಮದಿನ. ಅಂದು A2 musicನಲ್ಲಿ ಈ ಚಿತ್ರದ ಟೀಸರ್‌ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ವಿಶೇಷ ಟೀಸರ್‌ ಬಿಡುಗಡೆಯ ಮೂಲಕ ಶಿವಣ್ಣನ ಜನ್ಮದಿನಕ್ಕೆ ಕಾಣಿಕೆ ನೀಡಲು ಅಣಿಯಾಗಿರುವ ಚಿತ್ರತಂಡ, ‘ಭಜರಂಗಿ 2’ ಯಾವ ರೀತಿ ಇರಲಿದೆ ಎನ್ನುವ ಪ್ರೇಕ್ಷಕರ ಕುತೂಹಲ ಮತ್ತು ಕ್ರೇಜ್‌ ಅನ್ನು ದುಪ್ಪಟ್ಟುಗೊಳಿಸಲು ಸಜ್ಜಾಗಿದೆ.


‘ಭಜರಂಗಿ 2’ ಚಿತ್ರದ ಪೋಸ್ಟರ್‌


ಈ ಚಿತ್ರದಲ್ಲಿ ಭಾವನಾ ಮೆನನ್‌ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸ್ವಾಮಿ ಜಿ. ಗೌಡ ಅವರ ಛಾಯಾಗ್ರಹಣವಿದೆ. ದೀಪು ಎಸ್‌. ಕುಮಾರ್‌ ಸಂಕಲನ ನಿರ್ವಹಿಸಿದ್ದಾರೆ. ಜಯಣ್ಣ–ಭೋಗೇಂದ್ರ ಬಂಡವಾಳ ಹೂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು