ಬುಧವಾರ, ಏಪ್ರಿಲ್ 1, 2020
19 °C

ಭಾರತೀಯ ವಾಯುಪಡೆ ಪೈಲಟ್‌ ಆದ ಕಂಗನಾ: 'ತೇಜಸ್‌' ಫಸ್ಟ್ ಲುಕ್‌ ಬಿಡುಗಡೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ 'ತಲೈವಿ' ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ 'ಕ್ವೀನ್‌' ಖ್ಯಾತಿಯ ಬಾಲಿವುಡ್‌ ನಟಿ ಕಂಗನಾ ರನೌತ್‌, ಭಾರತೀಯ ವಾಯುಪಡೆಯ ಪೈಲಟ್‌ ಆಗಿ ಕಾಣಿಸಿಕೊಂಡಿದ್ದಾರೆ.

'ತೇಜಸ್‌' ಹೆಸರಿನ ಸಿನಿಮಾದಲ್ಲಿ ಕಂಗನಾ ವಾಯುಪಡೆ ಪೈಲಟ್‌ ಆಗಿ ಅಭಿನಯಿಸಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಪೋಸ್ಟರ್‌ ಪ್ರಕಟಿಸಿರುವ 'ಟೀಮ್‌ ಕಂಗನಾ ರನೌತ್‌', ಕಂಗನಾ ಮುಂದಿನ ಚಿತ್ರವನ್ನು ಬಹಿರಂಗ ಪಡಿಸಿದೆ. 

'ಸಮವಸ್ತ್ರ ಧರಿಸಿ ದೇಶಕ್ಕಾಗಿ ಹಲವು ತ್ಯಾಗಗಳನ್ನು ಮಾಡುತ್ತಿರುವ ಧೈರ್ಯವಂತ ಮತ್ತು ಸದೃಢ ಮಹಿಳೆಯರಿಗಾಗಿ...ಕಂಗಾನ ಮುಂದಿನ ಚಿತ್ರ ತೇಜಸ್‌ನಲ್ಲಿ ವಾಯುಪಡೆ ಪೈಲಟ್‌ ಆಗಿ ಅಭಿನಯಿಸಲಿದ್ದಾರೆ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿಕೊಂಡಿದೆ. ಆರ್‌ಎಸ್‌ವಿಪಿ ಮೂವೀಸ್‌ ಚಿತ್ರ ನಿರ್ಮಾಣ ಮಾಡುತ್ತಿದೆ. 

ಭಾರತೀಯ ವಾಯುಪಡೆಯ ಪೈಲಟ್‌ ರೀತಿಯ ಸಮವಸ್ತ್ರ ಧರಿಸಿರುವ ಕಂಗನಾ, ಯುದ್ಧ ವಿಮಾನದ ಮುಂದೆ ನಡೆದು ಬರುತ್ತಿರುವಂತೆ ಪೋಸ್ಟರ್‌ ವಿನ್ಯಾಸ ಮಾಡಲಾಗಿದೆ. ಸರ್ವೇಶ್ ಮೇವಾರಾ 'ತೇಜಸ್‌' ನಿರ್ದೇಶಿಸುತ್ತಿದ್ದು, 2021ರ ಏಪ್ರಿಲ್‌ನಲ್ಲಿ ಬಿಡುಗಡೆಗೆ ಯೋಜನೆ ರೂಪಿಸಿಕೊಳ್ಳಲಾಗಿದೆ. 

ಬಿಡುಗಡೆಯಾಗಿರುವ ಕಂಗನಾ ನಟನೆಯ ಪಂಗಾ ಸಿನಿಮಾ ಅತ್ಯುತ್ತಮ ಅಭಿನಯವಿದ್ದರೂ ಹಣ ಗಳಿಕೆಯಲ್ಲಿ ಸೋತಿತು. ಪ್ರಸ್ತುತ ಕಂಗನಾ ಚೈನ್ನೈನಲ್ಲಿ ತಲೈವಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಭರತನಾಟ್ಯ ನೃತ್ಯದ ದೃಶ್ಯೀಕರಣದ ಸಂದರ್ಭದಲ್ಲಿನ ಕಂಗನಾ ಚಿತ್ರಗಳು ವೈರಲ್‌ ಆಗಿದ್ದವು. ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟನಾಗಿದ್ದ ಎಂ.ಜಿ.ರಾಮಚಂದ್ರನ್‌ ಅವರ ಪಾತ್ರದಲ್ಲಿ ಅರವಿಂದ್‌ ಸ್ವಾಮಿ ಅಭಿನಯಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು