ಮಂಗಳವಾರ, ಜೂನ್ 28, 2022
26 °C

ನಿರ್ಮಾಪಕಿ, ಖ್ಯಾತ ಕಾಸ್ಟಿಂಗ್ ಡೈರೆಕ್ಟರ್ ಸೆಹರ್ ಅಲಿ ಲತೀಫ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ನಿರ್ಮಾಪಕಿ ಹಾಗೂ ಕಾಸ್ಟಿಂಗ್‌ ನಿರ್ದೇಶಕಿ ಸೆಹರ್ ಅಲಿ ಲತೀಫ್ ಸೋಮವಾರ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದೊಂದು ವಾರದಿಂದ ಚೇತರಿಸಿಕೊಳ್ಳುತ್ತಿದ್ದ ಸೆಹರ್ ನಿಧನ ಹೊಂದಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ದಿವಂಗತ ನಟ ಇರ್ಫಾನ್ ಖಾನ್ ನಟನೆಯ ‘ದಿ ಲಂಚ್ ಬಾಕ್ಸ್‘ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಕಾಸ್ಟಿಂಗ್‌ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದರು. ಸೆಹರ್‌ಗೆ ಈ ಚಿತ್ರ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು.

ಸ್ವರಾ ಭಾಸ್ಕರ್ ಅಭಿನಯದ ಭಾಗ್ ಬೀನಿ ಭಾಗ್ ಹಾಗೂ ಮಸ್ಕಾ ಸಿನಿಮಾ ನಿರ್ಮಿಸುವ ಮೂಲಕ ಸೆಹರ್‌ ಖ್ಯಾತಿಗಳಿಸಿದ್ದರು.

ಸೆಹರ್ ನಿಧನಕ್ಕೆ ನಟಿ ನಿಮ್ರತ್ ಕೌರ್, ಸ್ವರಾ ಭಾಸ್ಕರ್, ನಟ ರಾಜ್ ಕುಮಾರ್ ರಾವ್, ಹುಮಾ ಖುರೇಷಿ, ಅನುರಾಗ್ ಕಶ್ಯಪ್ ಸೇರಿದಂತೆ ಬಾಲಿವುಡ್‌ನ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು