ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರವು ಗ್ರಾಮೀಣ ಹಿನ್ನೆಲೆಯ ಹಾಸ್ಯಮಯ ಕಥೆ ಹೊಂದಿದೆ. ಸಕಲೇಶಪುರ, ಸಾವನದುರ್ಗ, ಮಾಗಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದು ಹಾಡು ಮತ್ತು ಸಾಹಸ ದೃಶ್ಯವಿದ್ದು, ಅದ್ಭುತವಾಗಿ ಮೂಡಿಬಂದಿದೆ. ಕುಟುಂಬ ಸಮೇತರಾಗಿ ಪ್ರತಿಯೊಬ್ಬರೂ ನೋಡುವ ಚಿತ್ರವಿದು’ ಎಂದರು.