ಸಾಧು ಕೋಕಿಲ, ರಂಗಾಯಣ ರಘು, ತಬಲಾ ನಾಣಿ, ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ‘ರಮ್ಯಾ ಅವರು ಚೆನ್ನಾಗಿ ಇದ್ದರು. ಹಾಗಾಗಿ ‘ಸಂಜು ವೆಡ್ಸ್ ಗೀತಾ’ದಲ್ಲಿ ಅವರನ್ನು ಚೆನ್ನಾಗಿ ತೋರಿಸಲಾಗಿತ್ತು. ಕಳೆದ 10 ವರ್ಷಗಳಲ್ಲಿ ರಚಿತಾ ರಾಮ್ ಅವರಿಗಿಂತಲೂ ಬ್ಯೂಟಿಫುಲ್ ಆದ ನಟಿಯನ್ನು ನಾನು ನೋಡಿಲ್ಲ. ಹಾಗಾಗಿ ಅವರನ್ನು ಕೂಡ ‘ಸಂಜು ವೆಡ್ಸ್ ಗೀತಾ–2’ದಲ್ಲಿ ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ’ ಎಂದರು ಸಾಧು ಕೋಕಿಲ.