ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 5 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹಗಲುಕನಸು

ನಿರ್ದೇಶಕ ದಿನೇಶ್‌ ಬಾಬು ನಿರ್ದೇಶನ ಹಾಗೂ ಛಾಯಾಗ್ರಹಣದ ಮಾಸ್ಟರ್ ಆನಂದ್ ನಾಯಕನಾಗಿರುವ ‘ಹಗಲುಕನಸು’ ಸಿನಿಮಾ ಬಿಡುಗಡೆಯಾಗುತ್ತಿದೆ.

ಎಂ.ಪಿ.ಆರ್. ಫಿಲ್ಮ್ಸ್ ಅಡಿಯಲ್ಲಿ ವಿ.ಜಿ. ಅಚ್ಯುತರಾಜು, ಎಂ. ಪದ್ಮನಾಭ, ರಹಮತ್‌ ಬಂಡವಾಳ ಹೂಡಿದ್ದಾರೆ. ಕಾರ್ತಿಕ್ ವೆಂಕಟೇಶ್ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸನಿಹಾ ಯಾದವ್, ನಾರಾಯಣಸ್ವಾಮಿ, ನೀನಾಸಂ ಅಶ್ವಥ್, ಮನದೀಪ್ ರಾಯ್, ಅಶ್ವಿನ್ ಹಾಸನ್, ಚಿತ್ಕಲಾ ಬಿರಾದಾರ್‌ ತಾರಾಗಣದಲ್ಲಿದ್ದಾರೆ.

19 ಏಜ್‌ ಈಸ್‌ ನಾನ್ಸೆನ್ಸ್?

ರಾಜೇಶ್ವರಿ ಫಿಲಂ ಲಾಂಛನದಡಿ ಎಸ್. ಲೋಕೇಶ್ ನಿರ್ಮಾಣದ ‘19 ಏಜ್‌ ಈಸ್‌ ನಾನ್ಸೆನ್ಸ್?’ ಸಿನಿಮಾ ತೆರೆ ಕಾಣುತ್ತಿದೆ.

ಗಿಣಿ ಈ ಚಿತ್ರ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ಛಾಯಾಗ್ರಹಣ ಜಿ. ವೆಟ್ರಿ ಅವರದು. ರವಿಚಂದ್ರನ್ ಅವರ ಸಂಕಲನವಿದೆ. ಸಂಗೀತ ಸಂಯೋಜಿಸಿರುವುದು ಕುಟ್ಟಿ. ಶಿವು ಸಾಹಸ ನಿರ್ದೇಶಿಸಿದ್ದಾರೆ. ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಮನುಷ್, ಮಧುಮಿತಾ, ಲಕ್ಷ್ಮಿ ಮಂಡ್ಯ, ಮೇಸ್ತ್ರಿ ಬಾಲು, ಸೌಭಾಗ್ಯ, ಕಾವ್ಯಾ ಪ್ರಕಾಶ್ ತಾರಾಗಣದಲ್ಲಿದ್ದಾರೆ.

ಕಥಾ ಸಂಗಮ

ರಿಷಬ್‌ ಶೆಟ್ಟಿ ಫಿಲಂಸ್ ಹಾಗೂ ಶ್ರೀದೇವಿ ಎಂಟರ್‌ಟೈನರ್ಸ್ ಲಾಂಛನದಡಿ ರಿಷಬ್ ಶೆಟ್ಟಿ, ಕೆ.ಎಚ್. ಪ್ರಕಾಶ್ ಹಾಗೂ ಪ್ರದೀ‍ಪ್‌ ಎನ್.ಆರ್. ನಿರ್ಮಿಸಿರುವ ‘ಕಥಾ ಸಂಗಮ’ ಸಿನಿಮಾ ಬಿಡುಗಡೆಯಾಗುತ್ತಿದೆ.

ಇದು ಏಳು ಕಥೆಗಳ ಗುಚ್ಛ. ಏಳು ನಿರ್ದೇಶಕರು ಈ ಸಿನಿಮಾ ನಿರ್ದೇಶಿಸಿದ್ದಾರೆ. ಮೊದಲ ಕಥೆ ನಿರ್ದೇಶಿಸಿರುವುದು ಶಶಿಕುಮಾರ್. ಜಯಂತ್ ಸೀಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜ್ ಬಿ. ಶೆಟ್ಟಿ, ಅನಿರುದ್ಧ್ ಮಹೇಶ್ ಸಂಭಾಷಣೆ ಬರೆದಿದ್ದಾರೆ. ಗೊಮಟೇಶ್ ಉಪಾಧ್ಯೆ ಅವರ ಛಾಯಾಗ್ರಹಣವಿದೆ. ದಾಸ್ ಮೊಡ್ ಸಂಗೀತ ನೀಡಿದ್ದಾರೆ. ಆರ್ಯ ಅವರ ಸಂಕಲನವಿದೆ. ರಾಜ್‌ ಬಿ. ಶೆಟ್ಟಿ, ಅಮೃತಾ ನಾಯಕ್, ಜೆ.ಪಿ. ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ.

ಚಂದ್ರಜಿತ್ ಬೆಳ್ಳಿಯಪ್ಪಎರಡನೇ ಕಥೆ ನಿರ್ದೇಶಿಸಿದ್ದಾರೆ. ಕಿಶೋರ್, ಯಜ್ಞಾಶೆಟ್ಟಿ, ಬಾಬು ಮೃದುನಿಕ ನಟಿಸಿದ್ದಾರೆ. ಗಗನ್ ಬಡೇರಿಯ ಸಂಗೀತ ಸಂಯೋಜಿಸಿದ್ದಾರೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ರಿತ್ವಿಕ್ ರಾವ್ ಅವರ ಸಂಕಲನವಿದೆ.

ಮೂರನೇ ಕಥೆಗೆ ಮಾಧುರಿ ಎನ್. ರಾವ್ ಹಾಗೂ ಕರಣ್ ಅನಂತ್ ಕಥೆ, ಚಿತ್ರಕಥೆ ಬರೆದಿದ್ದು, ಕರಣ್ ಅನಂತ್ ನಿರ್ದೇಶಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಸೌಮ್ಯಾ, ಜಗನ್‍ಮೂರ್ತಿ, ವಸು ದೀಕ್ಷಿತ್ ನಟಿಸಿದ್ದಾರೆ. ದೀಪಕ್ ಅವರ ಛಾಯಾಗ್ರಹಣವಿದೆ. ವಸು ದೀಕ್ಷಿತ್ ಸಂಗೀತ ನೀಡಿದ್ದಾರೆ. ಭರತ್ ಎಂ.ಸಿ. ಅವರ ಸಂಕಲನವಿದೆ.

ನಾಲ್ಕನೇ ಕಥೆಯ ತಾರಾಗಣದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಬಾಲಾಜಿ ಮನೋಹರ್ ಇದ್ದಾರೆ. ರಾಹುಲ್ ಪಿ.ಕೆ. ಅವರ ರಚನೆ ಹಾಗೂ ನಿರ್ದೇಶನವಿದೆ. ಸಂದೀಪ್ ಅವರ ಛಾಯಾಗ್ರಹಣವಿದೆ. ಅಜ್ಞಾತ್ ಅವರ ಸಂಗೀತ ನಿರ್ದೇಶನವಿದೆ. ವಿನಾಯಕ್ ಗುರುನಾರಾಯಣ್ ಅವರ ಸಂಕಲನವಿದೆ.

ಐದನೇ ಕಥೆ ನಿರ್ದೇಶಿಸಿರುವುದು ಜಮದಗ್ನಿ ಮನೋಜ್. ಅವಿನಾಶ್, ಹರಿ ಸಮಸ್ಟಿ ಅಭಿನಯಿಸಿದ್ದಾರೆ. ರಘುನಾಥ್ ಛಾಯಾಗ್ರಹಣ, ಅಭೀಷೇಕ್ ಅವರ ಸಂಕಲನ ಹಾಗೂ ಗಿರೀಶ್ ಹಾತೂರ್ ಅವರ ಸಂಗೀತ ನಿರ್ದೇಶನವಿದೆ.

ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ನಟನೆಯ ಆರನೇ ಕಥೆಗೆ ಕಿರಣ್ ರಾಜ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದರಲ್ಲಿ ರೂಬಿ(ನಾಯಿ) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣವಿದೆ. ರಿತ್ವಿಕ್ ರಾವ್ ಅವರ ಸಂಕಲನ ಹಾಗೂ ನೊಬಿನ್ ಪಾಲ್ ಅವರ ಸಂಗೀತ ನಿರ್ದೇಶನವಿದೆ.

ಏಳನೇ ಕಥೆಯಲ್ಲಿ ಪ್ರಣವ್, ರಾಘವೇಂದ್ರ, ಬೀರೇಶ್ ಪಿ. ಬಂಡೆ, ನಿಧಿ ಹೆಗ್ಡೆ ನಟಿಸಿದ್ದಾರೆ. ಜೈಶಂಕರ್ ಅವರ ರಚನೆ ಹಾಗೂ ನಿರ್ದೇಶನವಿದೆ. ಸೌರವ್ ಪ್ರತೀಕ್ ಸನ್ಯಾಲ್ ಅವರ ಛಾಯಾಗ್ರಹಣವಿದೆ. ಚಂದನ್ ಅವರ ಸಂಕಲನವಿದೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.

ಅಳಿದು ಉಳಿದವರು

ಅಶು ಬೆದ್ರ ನಿರ್ಮಿಸಿರುವ ‘ಅಳಿದು ಉಳಿದವರು’ ಚಿತ್ರ ಬಿಡುಗಡೆಯಾಗುತ್ತಿದೆ. ಅರವಿಂದ್ ಶಾಸ್ತ್ರಿ ನಿರ್ದೇಶನದ ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಅಭಿಷೇಕ್ ಕಾಸರಗೋಡು, ಅರವಿಂದ್ ಕಶ್ಯಪ್ ಹಾಗೂ ಅಭಿನ್ ರಾಜೇಶ್ ಅವರ ಛಾಯಾಗ್ರಹಣವಿದೆ. ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ಸುಧೀರ್ ಶ್ಯಾನಭೋಗ್ ಅವರ ಕಥೆಗೆ ಪ್ರವೀಣ್ ಕುಮಾರ್ ಹಾಗೂ ಪವನ್ ಭಟ್ ಸಂಭಾಷಣೆ ಬರೆದಿದ್ದಾರೆ.

ಅಶು ಬೆದ್ರ, ಸಂಗೀತಾ ಭಟ್, ಅತುಲ್ ಕುಲಕರ್ಣಿ, ಶೀಲಂ, ಬಿ. ಸುರೇಶ್, ದಿನೇಶ್ ಮಂಗಳೂರು, ಧರ್ಮಣ್ಣ, ಅಶೋಕ್ ರಾವ್, ಅರವಿಂದ್ ರಾವ್, ಸ್ವಾತಿ ಗುರುದತ್, ಪವನ್ ಕುಮಾರ್, ನಾಗೇಂದ್ರ ಶಾ, ಶ್ರೀಧರ್, ಹನುಮಂತೇಗೌಡ, ಸುಧಾಕರ್, ರವಿ ಭಟ್, ಸ್ಪಂದನಾ, ವಿಶ್ವನಾಥ್, ಚಾರ್ಲಿ ತಾರಾಬಳಗದಲ್ಲಿದ್ದಾರೆ.

ಬಬ್ರೂ

ಸುಮನ್ ನಗರಕರ್‌ ಪ್ರೊಡಕ್ಷನ್‌ ಮತ್ತು ಯುಗ ಕ್ರಿಯೇಷನ್ಸ್ ಲಾಂಛನದಡಿ ನಿರ್ಮಿಸಿರುವ ‘ಬಬ್ರೂ’ ಚಿತ್ರ ತೆರೆ ಕಾಣುತ್ತಿದೆ.

ಸುಜಯ್ ರಾಮಯ್ಯ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸುಮುಖ ಅವರ ಛಾಯಾಗ್ರಹಣವಿದೆ.

ಬಿಂದು ಮಾಧವ ಅವರ ಸಂಕಲನವಿದೆ. ವರುಣ್ ಶಾಸ್ತ್ರಿ ಸಂಭಾಷಣೆ ಬರೆದಿದ್ದಾರೆ. ಲೋಕೇಶ್ ಬಿ.ಎಸ್. ಅವರ ಸಹ ನಿರ್ದೇಶನವಿದೆ. ಗುರುದೇವ್ ನಾಗರಾಜ(ಗುರು) ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ. ಸುಮನ್ ನಗರಕರ್, ಮಹಿ ಹಿರೇಮಠ, ರೇತೊಸ್ತಾಡೊ, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ತಾರಾಗಣದಲ್ಲಿದ್ದಾರೆ.

ಐ1

ಎಸ್.ಪಿ. ಪಿಕ್ಚರ್ಸ್ ಲಾಂಛನದಡಿ ಶೈಲಜಾ ಪ್ರಕಾಶ್‌ ನಿರ್ಮಿಸಿರುವ ‘ಐ1’ ಚಿತ್ರ ಬಿಡುಗಡೆಯಾಗುತ್ತಿದೆ.

ಆರ್.ಎಸ್. ರಾಜಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ವಿಬಿನ್ ಆರ್. ಸಂಗೀತ ನೀಡಿದ್ದಾರೆ. ಶಿನೂಬ್ ಟಿ ಚಾಕೋ ಅವರ ಛಾಯಾಗ್ರಹಣವಿದೆ. ವಿಶಾಖ್ ರಾಜೇಂದ್ರನ್ ಅವರ ಸಂಕಲನವಿದೆ. ಅಶೋಕ್‌ ಸಾಹಸ ನಿರ್ದೇಶಿಸಿದ್ದಾರೆ. ವಿ. ನಾಗೇಂದ್ರಪ್ರಸಾದ್ ಹಾಗೂ ಉಮೇಶ್ ಎಸ್. ಹಾಡುಗಳನ್ನು ಬರೆದಿದ್ದಾರೆ. ಕಿಶೋರ್, ಧೀರಜ್‌ಪ್ರಸಾದ್,
ರಂಜನ್ ಎಂ.ಎಸ್.ಬಿ. ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT