ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ರಾಜ್‌ಕುಮಾರ್ ನಟನೆಯ ‘ಯುವ’ ಸೇರಿ 2 ಕನ್ನಡ ಸಿನಿಮಾ ಇಂದು ತೆರೆಗೆ

Published 28 ಮಾರ್ಚ್ 2024, 22:30 IST
Last Updated 28 ಮಾರ್ಚ್ 2024, 22:30 IST
ಅಕ್ಷರ ಗಾತ್ರ
ಸ್ಯಾಂಡಲ್‌ವುಡ್‌ಗೆ ಐ‍ಪಿಎಲ್‌, ಚುನಾವಣೆ ಬಿಸಿ ನಿಧಾನಕ್ಕೆ ತಟ್ಟಲು ಪ್ರಾರಂಭಿಸಿದೆ. ಕಳೆದ ಮೂರು ತಿಂಗಳಲ್ಲಿಯೇ ಕನಿಷ್ಠವೆಂಬಂತೆ ಈ ವಾರ ಎರಡು ಸಿನಿಮಾಗಳು ತೆರೆ ಕಾಣುತ್ತಿವೆ. ಮಲಯಾಳಂನಿಂದ ಕನ್ನಡಕ್ಕೆ ಡಬ್‌ ಆಗಿರುವ ಒಂದು ಚಿತ್ರ ಕೂಡ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ...

ಯುವ

ರಾಜ್‌ಕುಮಾರ್‌ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ ಅವರ ಚೊಚ್ಚಲ ಚಿತ್ರ ‘ಯುವ’ ಇಂದು (ಮಾ.29) ತೆರೆ ಕಾಣುತ್ತಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿರುವ ಈ ಚಿತ್ರಕ್ಕೆ ಸಂತೋಷ್ ಆನಂದರಾಮ್ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. ಕೌಟುಂಬಿಕ ಹಾಗೂ ಆ್ಯಕ್ಷನ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ತಂದೆ - ಮಗನ ಬಾಂಧವ್ಯವೂ ಪ್ರಮುಖ ಅಂಶವಾಗಿದೆ. ಅಪ್ಪನ ಗುಣಗಳನ್ನು ವರ್ಣಿಸುವ ‘ಅಪ್ಪುಗೆ’ ಹಾಡು ಈಗಾಗಲೇ ಬಿಡುಗಡೆಯಾಗಿದೆ.ಯುವ ರಾಜ್‌ಕುಮಾರ್‌ ಫುಡ್‌ ಡೆಲಿವರಿ ಬಾಯ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಚಿತ್ರಗ್ರಹಣವಿದೆ. ಯುವನಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದು, ಅಚ್ಯುತ್‌ ಕುಮಾರ್‌ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್‌ ರಾಜ್‌ ಸೇರಿದಂತೆ ಹಲವು ಕಲಾವಿದರ ದಂಡೇ ತಾರಾಗಣದಲ್ಲಿದೆ. 

ತಾರಿಣಿ

ಈಗಾಗಲೇ ಹಲವಾರು ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ‘ತಾರಿಣಿ’ ಚಿತ್ರ ಕೂಡ ಇಂದು ತೆರೆಗೆ ಬರುತ್ತಿದೆ. ನಟಿ ಮಮತಾ ರಾಹುತ್ ಮುಖ್ಯಭೂಮಿಕೆಯಲ್ಲಿರುವ ಮಹಿಳಾ ಪ್ರಧಾನ ಚಿತ್ರವನ್ನು ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. 

ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡಿರುವ ಈ ಚಿತ್ರವನ್ನು ಗಜನಿ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಸುರೇಶ್ ಕೋಟ್ಯಾನ್ ನಿರ್ಮಿಸಿದ್ದಾರೆ. ನಟಿ ಮಮತಾ ರಾವುತ್‌ ಗರ್ಭಿಣಿಯಾದ 7ನೇ ತಿಂಗಳಿಂದ ಚಿತ್ರೀಕರಣ ಪ್ರಾರಂಭಿಸಿ ಒಂಬತ್ತನೇ ತಿಂಗಳು ತುಂಬಿದಾಗಲೂ ಇದರಲ್ಲಿ ಭಾಗಿಯಾಗಿದ್ದು ಈ ಚಿತ್ರದ ವಿಶೇಷ.

ನಾಯಕನಾಗಿ ರೋಹಿತ್ ಕಾಣಿಸಿಕೊಂಡಿದ್ದು, ಭವಾನಿ ಪ್ರಕಾಶ್, ಸುಧಾ ಪ್ರಸನ್ನ ಮೊದಲಾದವರು ಚಿತ್ರದಲ್ಲಿದ್ದಾರೆ. ಅನಂತ್ ಆರ್ಯನ್‌ ಸಂಗೀತ, ದೀಪಕ್ ಸಂಕಲನ ಚಿತ್ರಕ್ಕಿದೆ.

ಆಡುಜೀವಿತಂ (ಮಲಯಾಳಂನಿಂದ ಕನ್ನಡಕ್ಕೆ ಡಬ್‌)

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂನ ಬಹುನಿರೀಕ್ಷಿತ ಚಿತ್ರ ‘ಆಡುಜೀವಿತಂ(ಗೋಟ್ ಲೈಫ್)’ ಮಾ.28ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಂಡಿದೆ. ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್‌ ಮೂಲಕ ಬಿಡುಗಡೆಯಾಗಿರುವ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬ್ಲೆಸ್ಸಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಮಲಾ ಪೌಲ್, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT