ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕದ್ದಚಿತ್ರ’ ಸೇರಿದಂತೆ ಮೂರು ಸಿನಿಮಾಗಳು ಇಂದು ತೆರೆಗೆ

Published 7 ಸೆಪ್ಟೆಂಬರ್ 2023, 23:30 IST
Last Updated 7 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕದ್ದಚಿತ್ರ

ವಿಜಯ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ‘ಕದ್ದಚಿತ್ರ’. ಸುಹಾಸ್ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ನಟಿಸಿದ್ದ ನಮ್ರತಾ ಸುರೇಂದ್ರನಾಥ್ ಇಲ್ಲಿ ನಾಯಕಿ. ಕೃತಿ ಚೌರ್ಯದ ಕಥಾಹಂದರವನ್ನು ಹೊಂದಿದ ಸೈಕಾಲಾಜಿಕಲ್‌ ಥ್ರಿಲ್ಲರ್‌ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರು ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಟಾಕೀಸ್‌ ನಿರ್ಮಾಣದ ಚಿತ್ರಕ್ಕೆ ಕೃಷ್ಣರಾಜ್‌ ಸಂಗೀತ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಚಿತ್ರಗ್ರಹಣ, ಗೌತಮ್ ಮನು ಸಂಕಲನವಿದೆ.

ಅವಳು ಲೈಲಾ ಅಲ್ಲ, ನಾನು ಮಜ್ನು ಅಲ್ಲ

ಯಲ್ಲು ಪುಣ್ಯಕೋಟಿ ಅವರ ನಿರ್ದೇಶನದಲ್ಲಿ, ಅಜಯ್ ನಾಯಕನಾಗಿ ನಟಿಸಿರುವ ‘ಅವಳು ಲೈಲಾ ಅಲ್ಲ ನಾನ್ ಮಜ್ನು ಅಲ್ಲ’ ಚಿತ್ರ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ನಿಹಾರಿಕಾ ಹಾಗೂ‌ ಅಶ್ವಿನಿ ಎಂಬ ಇಬ್ಬರು ನಾಯಕಿಯರು. ಕೌಶಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಳ್ಳಿ ಮತ್ತು ನಗರದಲ್ಲಿ ನಡೆಯುವ ಈ ಕಥೆಯನ್ನು ಚಿತ್ರದುರ್ಗ, ಹೊಸಪೇಟೆ, ಬೆಂಗಳೂರು, ಹಿರಿಯೂರು, ಬಳ್ಳಾರಿ, ರಾಯಚೂರು, ಕೊಪ್ಪಳ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಪರ್ಯಾಯ

ಮೂವರು ಅಂಗವಿಕಲರ ಸುತ್ತ ನಡೆಯುವ ಕಥೆಯನ್ನು ಹೇಳುವ ಚಿತ್ರ ‘ಪರ್ಯಾಯ’. ಮಮತಾ ಕ್ರಿಯೇಶನ್ಸ್ ಮೂಲಕ ರಾಜಕುಮಾರ್ ಹಾಗೂ ಶ್ರೀಮತಿ ಇಂದುಮತಿ ರಾಜ್ ಕುಮಾರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ರಾಜ್ ಕುಮಾರ್ ಅವರೇ ಅಂಧನ ಪಾತ್ರವನ್ನೂ ನಿರ್ವಹಿಸಿದ್ದಾರೆ. ಬೆಳಗಾವಿ, ಗೋವಾ ಗಡಿಯ ಚಿಗುಳೆ ಎಂಬ ಹಳ್ಳಿಯೊಂದರಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಕಿವುಡನ‌ ಪಾತ್ರದಲ್ಲಿ ಮುರುಗೇಶ್, ಕಿವುಡನ ಪಾತ್ರದಲ್ಲಿ ರಂಜನ್ ಕುಮಾರ್ ನಟಿಸಿದ್ದಾರೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ, ಜಿ.ರಂಗಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT