‘ಹಿಂದಿ ಹೇರಿಕೆ ವಿರುದ್ಧ ಒಗ್ಗೂಡಬೇಕಿದೆ’
ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಗಳು ದ್ರಾವಿಡ ಭಾಷೆಯಡಿ ಬರುತ್ತವೆ. ಇವುಗಳಲ್ಲಿ ಸಾಮ್ಯತೆ ಇರಬಹುದೇ ವಿನಾ ಯಾವ ಭಾಷೆಯೂ ಮತ್ತೊಂದು ಭಾಷೆಗಿಂತ ಶ್ರೇಷ್ಠವಲ್ಲ ಎಂದು ನಟಿ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿ ಎಂದುಕೊಂಡಿದ್ದರೆ ಅದೂ ತಪ್ಪು ತಿಳಿವಳಿಕೆ. ಸಂಸ್ಕೃತವು ಇಂಡೋ–ಆರ್ಯನ್‌ಗೆ ಸೇರಿದ್ದಾಗಿದ್ದು, ನಾವು ದ್ರಾವಿಡರು. ಇಂಡೋ–ಆರ್ಯನ್ ವಲಸೆಗಿಂತಲೂ ಮೊದಲೇ ನಾವಿಲ್ಲಿ ಇದ್ದೆವು. ಕಮಲ್ ಹಾಸನ್ ಅವರು ಒಂದು ಬೀಸು ಹೇಳಿಕೆಯನ್ನು ನೀಡಿದ್ದಾರೆ. ಆ ಮಾತ್ರಕ್ಕೆ ಅವರ ಸಿನಿಮಾವನ್ನೇ ನಿಷೇಧಿಸಲು ಮುಂದಾಗಿರುವುದು ತುಸು ಅತಿರೇಕವಲ್ಲವೇ? ಪ್ರಸ್ತುತ ನಾವು ಹಿಂದಿ ಹೇರಿಕೆ ವಿರುದ್ಧ ಒಗ್ಗೂಡಬೇಕಿದೆ. ಇದಕ್ಕಾಗಿ ಮೊದಲು ನಾವು ಪರಸ್ಪರ ಗೌರವ ಕೊಡಬೇಕಾಗಿದೆ ಎಂದಿದ್ದಾರೆ.